ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ?

Cabinet formation  in Two Days
Highlights

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಹುತೇಕ ಒಂದು ವಾರದೊಳಗೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ಬೆಂಗಳೂರು : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಹುತೇಕ ಒಂದು ವಾರದೊಳಗೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮೂಲಗಳ ಪ್ರಕಾರ ಸೋಮವಾರವೇ ಸಚಿವ ಸಂಪುಟ ವಿಸ್ತರಣೆ ಮಾಡುವ ಉದ್ದೇಶವಿದೆ. ಆದರೆ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗೆ ದೊರೆಯಬೇಕಿರುವ ಪ್ರಮುಖ ಖಾತೆಗಳು ಯಾವುವು ಎಂಬುದು ಇನ್ನೂ ನಿರ್ಧಾರವಾಗಬೇಕಿದೆ. ಅಲ್ಲದೆ, ಕಾಂಗ್ರೆಸ್‌ನಿಂದ ಸಚಿವರಾಗುವವರ ಪಟ್ಟಿಯೂ ಆ ಪಕ್ಷದಿಂದ ಬರಬೇಕಿದೆ. ಈ ಪ್ರಕ್ರಿಯೆ ಭಾನುವಾರದೊಳಗೆ ಪೂರ್ಣಗೊಂಡರೆ ಸೋಮವಾರವೇ ಸಂಪುಟ ವಿಸ್ತರಣೆ ನಡೆಯಲಿದೆ.

ಒಂದು ವೇಳೆ ಈ ಪ್ರಕ್ರಿಯೆಯು ವಿಳಂಬವಾದರೆ ಒಂದೆರಡು ದಿನ ವಿಸ್ತರಣೆ ಮುಂದಕ್ಕೆ ಹೋಗಬಹುದು ಎಂದು ಮೂಲಗಳು ತಿಳಿಸಿವೆ. ಈ ನಡುವೆ ಕಾಂಗ್ರೆಸ್‌ ರಾಜ್ಯ ನಾಯಕರು ಸಂಪುಟ ರಚನೆ ಕುರಿತು ಹೈಕಮಾಂಡ್‌ ಜತೆ ಚರ್ಚೆ ನಡೆಸಲು ಮೇ 26ರಂದು ದೆಹಲಿಗೆ ತೆರಳಲಿದ್ದು, ಬಹುತೇಕ ಭಾನುವಾರ ಸಂಜೆಯ ವೇಳೆಗೆ ಕಾಂಗ್ರೆಸ್‌ ಸಚಿವರ ಪಟ್ಟಿಸಿದ್ಧವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

loader