ಹಾಗೆ ಹೇಳಿದ್ದರೆ ನನಗೂ ನನ್ನ ಕುಟುಂಬಕ್ಕೂ ಗಲ್ಲು ಶಿಕ್ಷೆ ನೀಡಿ

BZ Zameer Ahmed Khan Clarify His Statement
Highlights

ನಾನು ಮುಸ್ಲಿಂ ಆಗಿರಬಹುದು ಅದಕ್ಕು ಮುನ್ನ ನಾನೊಬ್ಬ ಹಿಂದೂಸ್ಥಾನಿ ಭಾರತೀಯ, ಕನ್ನಡಿಗ. ರಾಜ್ಯದ ಎಲ್ಲ ಭಾಗದಲ್ಲಿ ಮುಸ್ಲಿಂ ಸಮುದಾಯದ ನನ್ನ ಬೆಂಬಲ ಕ್ಕೆ ನಿಂತಿದೆ. ಬಿಜೆಪಿಗೆ ಈ ಬೆಂಬಲ ನೋಡಿ ಸಹಿಸಲು ಸಾಧ್ಯ ಆಗುತ್ತಿಲ್ಲ‌.

ಬಾಗಲಕೋಟೆ(ಮೇ.04): ಹಿಂದುತ್ವ ವಿರುದ್ಧದ ಹೇಳಿಕೆಗೆ ಮಾಜಿ ಶಾಸಕ ಜಮೀರ್ ಅಹ್ಮದ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.  
ಬಾದಾಮಿಯ ಗುಳೆದಗುಡ್ಡ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಮುಸ್ಲಿಂ ಆಗಿರಬಹುದು ಅದಕ್ಕು ಮುನ್ನ ನಾನೊಬ್ಬ ಹಿಂದೂಸ್ಥಾನಿ ಭಾರತೀಯ, ಕನ್ನಡಿಗ. ರಾಜ್ಯದ ಎಲ್ಲ ಭಾಗದಲ್ಲಿ ಮುಸ್ಲಿಂ ಸಮುದಾಯದ ನನ್ನ ಬೆಂಬಲ ಕ್ಕೆ ನಿಂತಿದೆ. ಬಿಜೆಪಿಗೆ ಈ ಬೆಂಬಲ ನೋಡಿ ಸಹಿಸಲು ಸಾಧ್ಯ ಆಗುತ್ತಿಲ್ಲ‌. ಬಿಜೆಪಿ ನಾಯಕರು ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ. ನಾನು ಹಿಂದುತ್ವ ವಿರೋಧಿ ಹೇಳಿಕೆ ನೀಡಿಲ್ಲ. ಅದನ್ನ ಸಾಬೀತುಪಡಿಸಿದರೆ  ಶಿಕ್ಷೆ ಅನುಭವಿಸಲು ಸಿದ್ಧ. ನನಗೂ ನನ್ನ ಕುಟುಂಬಕ್ಕೂ ಗಲ್ಲು ಶಿಕ್ಷೆ ನೀಡಬೇಕು' ಎಂದು ಸವಾಲೆಸೆದರು.  
ಅಸಾದುದ್ದೀನ್ ಒವೈಸಿ ಪ್ರಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದೇವೇಗೌಡ ನನ್ನ ವಿರುದ್ಧ ಏನೆ ತಂತ್ರ ಮಾಡಿದರೂ ನಡೆಯೋಲ್ಲ. ದೇವೇಗೌಡರಿಗೆ ಕೈಮುಗಿದು ಹೇಳ್ತೀನಿ ಇನ್ನು ಯಾರಿದ್ದಾರೋ ಅವರಿಂದಲೂ ನನ್ನ ವಿರುದ್ಧ ಪ್ರಚಾರ ಮಾಡಿಸಲಿ. ನಾನು ಕ್ಷೇತ್ರದ ಮನೆಮಗನಿದ್ದೇನೆ‌. ದೇವೇಗೌಡ ಮೊದಲು ಜೆಡಿಎಸ್ ನಿಂದ ಎಸ್ ಪದ ತಗೆಸಲಿ.  ಅದು ಜೆಡಿಎಸ್ ಪಕ್ಷವಲ್ಲ ಜಾತ್ಯಾತೀತ ಜನತಾದಳ ಸಂಘ ಪರಿವಾರವಾಗಿದೆ' ಎಂದು ಚೇಡಿಸಿದರು.

loader