ಮೊದಲು ಹಿಂದೂಸ್ತಾನಿ,ಕನ್ನಡಿಗ ಆನಂತರವಷ್ಟೆ ಮುಸ್ಲಿಂ

BZ Zameer Ahmed Khan Clarify his Controversial Speech new
Highlights

ನಾನು ಬರೋದಕ್ಕೂ ಮುಂಚೆ ಹಿಂದೂ ಮುಸ್ಲೀಂ ಗಲಾಟೆ ನಡೆದಿತ್ತು. ಕಳೆದ 15 ವರ್ಷದಲ್ಲಿ ಒಂದೇ ಒಂದು ಹಿಂದೂ ಮುಸ್ಲಿಂ ಗಲಾಟೆ ಆಗಿಲ್ಲ. ಚಾಮರಾಜಪೇಟೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ಸ್ವರ್ಧೆ. ಜೆಡಿಎಸ್ ಇಲ್ಲಿ ಲೆಕ್ಕಕ್ಕಿಲ್ಲ ಎಂದರು.

ಬೆಂಗಳೂರು(ಮೇ.10): ತಮ್ಮ ಭಾಷಣವನ್ನು ತಿರುಚಿರುವ ಬಗ್ಗೆ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಝೆಡ್. ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.     
ನಾನು ಹಿಂದೂಗಳನ್ನ ಕೊಲೆ ಮಾಡ್ತೀನಿ ಅಂತಾ ಬಿಂಬಿಸಿದರು. ಹಿಂದೂಗಳನ್ನು ನಾನು ಅಣ್ಣತಮ್ಮಂದಿರು ಅಂತಾ ತಿಳ್ಕೊಂಡಿದ್ದೇನೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ನಾನು ಸಚಿವನಾದರೆ ಒಳ್ಳೆಯ ಆಡಳಿತ ಕೊಡ್ತೀನಿ ಅಂತಾ ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ತಿರುಚಿ ಫೇಸ್'ಬುಕ್'ಗಳಲ್ಲಿ ಹರಿಯಬಿಟ್ಟರು. ನಾನು ಯಾವತ್ತೂ ಜಾತಿ ಧರ್ಮಗಳನ್ನ ಒಡೆದಿಲ್ಲ. 

loader