ರಾಯಚೂರು  (ಮೇ. 11):  ಬೂತ್ ಮಟ್ಟದ ಅಧಿಕಾರಿಯ ತಪ್ಪಿನಿಂದ ಕುಟುಂಬವೊಂದು ಮತದಾನದಿಂದ ವಂಚಿತವಾಗುತ್ತಿರುವ ಘಟನೆ ಮಾನವಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.  ತಲೆಮಾರಿನಿಂದ ಮಾನವಿಯಲ್ಲಿ ವಾಸವಾಗಿದ್ದರೂ ಹೆಸರು ಡಿಲಿಟ್ ಮಾಡಲಾಗಿದೆ.  ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಲಾಲುದ್ದಿನ್ ಮಾನವಿ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.  

ರಾಯಚೂರು (ಮೇ. 11):  ಬೂತ್ ಮಟ್ಟದ ಅಧಿಕಾರಿಯ ತಪ್ಪಿನಿಂದ ಕುಟುಂಬವೊಂದು ಮತದಾನದಿಂದ ವಂಚಿತವಾಗುತ್ತಿರುವ ಘಟನೆ ಮಾನವಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. 

ಮಾನವಿಯ 16 ವಾರ್ಡಿನ ಸಲಾಲುದ್ದಿನ್ ಎಂಬುವವರು ಮತದಾನದಿಂದ ವಂಚಿತವಾಗುತ್ತಿದ್ದಾರೆ. ಬೂತ್ ಮಟ್ಟದ ಅಧಿಕಾರಿ ಇಕ್ಬಾಲ್ ಅಹ್ಮದ್ ಎನ್ನುವವರು ಸಲಾಲುದ್ದಿನ್ ಹಾಗೂ ಅವರ ಕುಟುಂಬದವರ ಹೆಸರನ್ನು ಡಿಲಿಟ್ ಮಾಡಿದ್ದಾರೆ. ಸ್ಥಳೀಯ ರಾಜಕೀಯ ಮುಖಂಡರ ಪ್ರಭಾವದಿಂದ ತಮ್ಮ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ತಲೆಮಾರಿನಿಂದ ಮಾನವಿಯಲ್ಲಿ ವಾಸವಾಗಿದ್ದರೂ ಹೆಸರು ಡಿಲಿಟ್ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಲಾಲುದ್ದಿನ್ ಮಾನವಿ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.