ಬೆಂಗಳೂರು : ಕರ್ನಾಟಕ ರಾಜಕೀಯದ ಹೈ ಡ್ರಾಮದ ಬಳಿಕ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಲು ಸಿದ್ದರಾಗಿದ್ದಾರೆ. ಇಂದು ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 

ರಾತ್ರಿ ಇಡೀ ಸುಪ್ರೀಂಕೋರ್ಟ್ನಲ್ಲಿ ಈ ಸಂಬಂಧ ವಿಚಾರಣೆ ನಡೆದಿದ್ದು, ಕಲಾಪದ ಬಗ್ಗೆ ನಾಯಕರು ಮಾಹಿತಿ ಪಡೆದುಕೊಂಡಿದ್ದಾರೆ. ಮುರುಳಿಧರ್ ರಾವ್ , ಧರ್ಮೆಂದ್ರ ಪ್ರಧಾನ್, ಶ್ರೀರಾಮುಲು , ಶೋಭಾ ಕರಾಂದ್ಲಾಜೆ ಜೊತೆ ಚರ್ಚೆ ರಾತ್ರಿ ಪೂರ್ತಿ ಸುಪ್ರೀಂಕೋರ್ಟ್ ಬೆಳವಣಿಗೆಯನ್ನು ಯಡಿಯೂರಪ್ಪ ವೀಕ್ಷೀಸಿದರು. 

ರಾಜ್ಯಪಾಲರ ಅಂಕಿತದ ಬಳಿಕ ಇದೀಗ ಸುಪ್ರೀಂ ಕೋರ್ಟ್ ಸಹ  ಪ್ರಮಾಣ ವಚನ ಸ್ವೀಕಾರಕ್ಕೆ ಅಂಕಿತ ನೀಡಿದ್ದು,  ಗ್ರೀನ್ ಸಿಗ್ನಲ್ ನೀಡಿದ್ದಕ್ಕೆ  ಬಿಎಸ್ ವೈ ಸಂತಸ ವ್ಯಕ್ತಪಡಿಸಿದ್ದಾರೆ. 

ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಯಡಿಯೂರಪ್ಪ, ಜ್ಯೋತಿಷಿ ಮತ್ತು ಹಿತೈಷಿಗಳ ಸಲಹೆಯಂತೆ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಲಿದ್ದಾರೆ.