ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ; ಕೇಸರಿ ಪಾಳಯದಲ್ಲಿ ಶುರುವಾಗಿದೆ ಢವಢವ

BSY in full Tension
Highlights

ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪನವರಿಗೆ ಅಗ್ನಿಪರೀಕ್ಷೆ ಶುರುವಾಗಿದೆ. ಹೈವೋಲ್ಟೇಜ್ ಟೆನ್ಷನ್’ಗೆ ಸಾಕ್ಷಿಯಾಗಲಿದೆ ರಾಜ್ಯ ವಿಧಾನ ಸಭೆ. ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಚಿದಂಬರ ರಹಸ್ಯವಾಗಿದೆ. 

ಬೆಂಗಳೂರು (ಮೇ. 19): ವಿಶ್ವಾಸ ಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ಯಡಿಯೂರಪ್ಪನವರಿಗೆ ಅಗ್ನಿಪರೀಕ್ಷೆ ಶುರುವಾಗಿದೆ. ಹೈವೋಲ್ಟೇಜ್ ಟೆನ್ಷನ್’ಗೆ ಸಾಕ್ಷಿಯಾಗಲಿದೆ ರಾಜ್ಯ ವಿಧಾನ ಸಭೆ. ಸರ್ಕಾರ ಉರುಳುತ್ತಾ, ಉಳಿಯುತ್ತಾ ಎಂಬುದು ಚಿದಂಬರ ರಹಸ್ಯವಾಗಿದೆ. 

ಬೆಳಿಗ್ಗೆ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಜೆಡಿಎಸ್ ನ 37, ಕಾಂಗ್ರೆಸ್ ನ 76 ಶಾಸಕರು  ಹಾಜರಾಗಿದ್ದಾರೆ. ಎರಡೂ ಪಕ್ಷಗಳ ಸಂಖ್ಯಾಬಲ 122 ಆಗಿದೆ. ಆದರೆ ಬಿಜೆಪಿ ಸಂಖ್ಯಾ ಬಲ 104 ಇದ್ದು ಬಹುಮತಕ್ಕೆ 8 ಅಭ್ಯರ್ಥಿಗಳು ಬೇಕಾಗಿದ್ದಾರೆ. ವಿಶ್ವಾಸ ಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದು ಬಿಎಸ್ ವೈ ಆತಂಕ ಹೆಚ್ಚಾಗಿದೆ. ಏತನ್ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆ ಮಾಡಿ ಡೋಂಟ್ ವರಿ ಎಂದು ವಿಶ್ವಾಸ  ತುಂಬಿದ್ದಾರೆ. 3 ಗಂಟೆವರೆಗೆ ಕಾದು ನೋಡುವ ತಂತ್ರ ಮಾಡಿದ್ದಾರೆ. 

104 ಶಾಸಕರನ್ನು ಹೊಂದಿರುವ ಬಿಜೆಪಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾ? ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಮುಂದುವರೆಯುತ್ತಾರಾ? ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. 

loader