ಶಿವಮೊಗ್ಗ : ಕಾಂಗ್ರೆಸ್ ಬಿಜೆಪಿ ನಡುವಿನ ಟ್ವೀಟ್ ವಾರ್ ಮುಂದುವರಿದಿದೆ. 2  ಪಕ್ಷಗಳ ನಡುವೆ ಆಮದು ಸಮರ ನಡೆದು ಕನ್ನಡಿಗರು ಹೊರಗಿನವರು ಎನ್ನುವ ಜಟಾಪಟಿ ಜೋರಾಗಿತ್ತು. 

ಇದೀಗ ಇದರ ಬೆನ್ನಲ್ಲೇ  ಯಡಿಯೂರಪ್ಪ ಹಾಗೂ  ರೆಡ್ಡಿ ಸಹೋದರರು ಕರ್ನಾಟಕವನ್ನು ಲೂಟಿ ಮಾಡಿದ್ದಾರೆ ಎನ್ನುವ ರಾಹುಲ್ ಟ್ವೀಟ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. 

ಭ್ರಷ್ಟಾಚಾರದಲ್ಲಿ ತೊಡಗಿದ್ದ  ಜನರನ್ನು ವಿಧಾನಸಭೆಗೆ ಕರೆತರಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ. ಈ ನಿರ್ಧಾರ ಪ್ರತಿಯೊಬ್ಬ ಪ್ರಾಮಾಣಿಕ ನಾಗರಿಕನಿಗೂ ಮಾಡುತ್ತಿರುವ ಅವಮಾನ ಎಂದು ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್’ಗೆ ಬಿಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ನಡೆದ ಪ್ರಚಾರ ಕಾರ್ಯದ ವೇಳೆ ಪ್ರತಿಕ್ರಿಯಿಸಿದ್ದಾರೆ. 

ಕಾಂಗ್ರೆಸ್ ನಲ್ಲಿ ಹಗಲು ದರೋಡೆ ಮಾಡಿದ ಭ್ರಷ್ಟ ಸಚಿವರು ಅನೇಕರು ಇದ್ದಾರೆ. ಅದನ್ನು ಬಿಟ್ಟು ಬಿಜೆಪಿ ಬಗ್ಗೆ  ಮಾತನಾಡುವುದು ಹಾಸ್ಯಾಸ್ಪದ ಸಂಗತಿಯಾಗಿದೆ. 
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಓರ್ವ ತಲೆ ತಿರುಕ ಎಂದು  ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಮತದಾನ ನಿಮ್ಮ ಹಕ್ಕು, ನಿಮ್ಮ ಜವಾಬ್ದಾರಿ ಕೂಡಾ | ತಪ್ಪದೇ ಮತ ಹಾಕಿ – ಮೇ 12, 2018