ನಾಳೆ ಬೆಳಿಗ್ಗೆ 9 ಗಂಟೆಗೆ ಬಿಎಸ್'ವೈ ಪ್ರಮಾಣ ವಚನ

First Published 16, May 2018, 8:11 PM IST
BS Yadiyurappa Tomorrow 9.30  swearing as CM
Highlights

ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ 104, ಕಾಂಗ್ರೆಸ್'ಗೆ 78 ಹಾಗೂ ಜೆಡಿಎಸ್'ಗೆ 38 ಸ್ಥಾನ  ಲಭಿಸಿದ್ದವು. 

ಬೆಂಗಳೂರು(ಮೇ.16): ನಾಳೆ ಬೆಳಿಗ್ಗೆ 9  ಗಂಟೆಗೆ  ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
ಬಿಎಸ್'ವೈ ನಿವಾಸದಿಂದ ಮಾತನಾಡಿದ ಅವರು, ಈಗಷ್ಟೆ ರಾಜಭವನದಿಂದ ಮಾಹಿತಿ ಬಂದಿದ್ದು ನಾಳೆ ಪ್ರಮಾಣ ವಚನ ಸ್ವೀಕರಿಸುವುದು ಖಚಿತ ಎಂದು ಹೇಳಿದರು. 8.30ಕ್ಕೆ ಎಲ್ಲ ಮುಖಂಡರಿಗೂ ಆಹ್ವಾನ ಬಂದಿದ್ದು ಬಹುಮತ ಸಾಬೀತಿಗೆ 15 ದಿನಗಳ ಕಾಲ ಗಡುವು ನೀಡಿದ್ದಾರೆ. ಮೋದಿ ಸೇರಿದಂತೆ ಯಾವ ನಾಯಕರು ಪಾಲ್ಗೊಳ್ಳುತ್ತಿಲ್ಲ' ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ 104, ಕಾಂಗ್ರೆಸ್'ಗೆ 78 ಹಾಗೂ ಜೆಡಿಎಸ್'ಗೆ 38 ಸ್ಥಾನ  ಲಭಿಸಿದ್ದವು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಅವಕಾಶ ಕೇಳಿದರೆ, ತಾನು ಅತಿ ದೊಡ್ಡ ಪಕ್ಷ ಬಿಜೆಪಿಗೂ ಹಕ್ಕು ಮಂಡಿಸಲು ಅವಕಾಶ ನೀಡುವಂತೆ ಬಿಎಸ್'ವೈ ನೇತೃತ್ವದ ಮುಖಂಡರು ಮನವಿ ಮಾಡಿದ್ದರು.

  

loader