ವೀರಶೈವರ ಮೇಲೆ ಕೇಸ್‌ ಹಾಕಿದ್ದೇ ಬೆಳಮಗಿಗೆ ಟಿಕೆಟ್‌ ತಪ್ಪಲು ಕಾರಣ

BS Yaddyurappa Talk About Belamagi Ticket Issue
Highlights

ಬಿಜೆಪಿಗೆ ಗುಡ್‌ ಬೈ ಹೇಳಿ ಜೆಡಿಎಸ್‌ ಸೇರಿ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಾಜಿ ಸಚಿವ ರೇವು ನಾಯಕ ಬೆಳಮಗಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್‌ ಸಿಡಿಸಿದ್ದಾರೆ.

ಕಲಬುರಗಿ: ಬಿಜೆಪಿಗೆ ಗುಡ್‌ ಬೈ ಹೇಳಿ ಜೆಡಿಎಸ್‌ ಸೇರಿ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಾಜಿ ಸಚಿವ ರೇವು ನಾಯಕ ಬೆಳಮಗಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್‌ ಸಿಡಿಸಿದ್ದಾರೆ. ಬೆಳಮಗಿಯವರು ಸಂಸದ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಕುಳಿತು ವೀರಶೈವರ ಮೇಲೆ ಕೇಸ್‌ ಹಾಕಿಸಿದ್ದಾರೆ ಎಂದು ಸಾಕ್ಷಿಸಮೇತ ಸಾಬೀತುಪಡಿಸಿದ ಸ್ಥಳೀಯ ಕಾಯಕರ್ತರು ಅವರಿಗೆ ಟಿಕೆಟ್‌ ಕೊಡೋದು ಬೇಡ ಎಂದು ಆಗ್ರಹಿಸಿದ್ದರು. 
ಹೀಗಾಗಿ ಅವರಿಗೆ ಟಿಕೆಟ್‌ ನೀಡಲಾಗಿಲ್ಲ ಹೊರತು ಟಿಕೆಟ್‌ ಹಂಚಿಕೆಯಲ್ಲಿ ಹಣದ ಕೊಡುಕೊಳ್ಳುವಿಕೆ ಯಾವುದೂ ನಡೆದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದಲ್ಲಿದ್ದಾಗ ಅವರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಲಾಗಿತ್ತು. ಆದರೂ ಬೇರೆ ಪಕ್ಷಕ್ಕೆ ಸೇರಿದ್ದಾರೆ. ಪಕ್ಷಬಿಟ್ಟು ಬೇರೆ ಪಕ್ಷಕ್ಕೆ ಹೋದ ವ್ಯಕ್ತಿ ಬಗ್ಗೆ ಹೆಚ್ಚು ಮಾತಾಡುವ ಅಗತ್ಯವಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದರು.

loader