ಬಿಜೆಪಿಗೆ 150 ಸ್ಥಾನ ಖಚಿತ : ಬಿ.ಎಸ್. ಯಡಿಯೂರಪ್ಪ

BJP will win 150 seats Says BS Yeddyurappa
Highlights

‘ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದನ್ನು ಕಾದು ನೋಡೋಣ. ಯಾವ ಸಮಯದಲ್ಲಿ ಚುನಾವಣೆ ಬಂದರೂ ಬಿಜೆಪಿ 150  ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
 

ಬೆಂಗಳೂರು : ‘ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದನ್ನು ಕಾದು ನೋಡೋಣ. ಯಾವ ಸಮಯದಲ್ಲಿ ಚುನಾವಣೆ ಬಂದರೂ ಬಿಜೆಪಿ 150  ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹುಣಸೆಮರ ಗ್ರಾಮದಲ್ಲಿ ತಾವು ಸಿಎಂ ಆಗಲಿಲ್ಲ ಎಂಬ ಸುದ್ದಿ ತಿಳಿದು ಟಿ.ವಿ.ನೋಡುವಾಗಲೇ ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿ ಚನ್ನಬಸಪ್ಪ ಅವರ ಮನೆಗೆ ಭೇಟಿ ನೀಡುವ ಮುನ್ನ ಸಂತೆಬೆನ್ನೂರಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು. 

ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮಿಷನ್ 150 ಕೇಲವೇ ಮತಗಳ ಅಂತರದಲ್ಲಿ ಕೈ ಜಾರಿದೆ. 25 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಬೆರಳೆಣಿಕೆಯ ಅಂತರದಲ್ಲಿ ಪರಾಭವ ಗೊಂಡಿದ್ದಾರೆ. ಆದರೆ, ಮುಂದೆ ಯಾವಾಗ ಚುನಾವಣೆ ಬಂದರೂ ಬಿಜೆಪಿಯ ಗೆಲುವು ಶತಸಿದ್ಧ. ನಾನು ಯಾವುದೇ ಕಾರಣಕ್ಕೂ ಸೋಲಿಗೆ ಹೆದರುವುದಿಲ್ಲ. ರಾಜ್ಯದಾದ್ಯಂತ ಪ್ರವಾಸ ಮಾಡಿ, ಮತ್ತೆ ಜನರ ಬಳಿಗೆ ಹೋಗಿ ಅವರ ಸಮ
ಸ್ಯೆಗಳನ್ನು ವಿಚಾರಿಸುತ್ತೇನೆ. ನಮ್ಮ ಸರ್ಕಾರದ ಸಾಧನೆಗಳ ಜತೆಗೆ ಜೆಡಿಎಸ್-ಕಾಂಗ್ರೆಸ್‌ನ ಅಪವಿತ್ರ ಮೈತ್ರಿ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರುತ್ತೆ, ದುಡುಕಬೇಡಿ: ಅಭಿಮಾನಿ ಗಳು ಎಂದಿಗೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ನಿಮ್ಮ ಆಶೀರ್ವಾದ ದಿಂದ ಬಿಜೆಪಿ 104 ಸ್ಥಾನಗಳನ್ನು ಪಡೆದು ಕೇವಲ 8 ಸ್ಥಾನಗಳ ಕೊರತೆಯಿಂದ ಅಧಿಕಾರ ಕಳೆದುಕೊಂಡಿದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಸಂತೆಬೆನ್ನೂರಿನ ಚನ್ನಬಸಪ್ಪ ಅವರು ನನಗೆ ಸಿಎಂ ಸ್ಥಾನ ತಪ್ಪಿದ್ದಕ್ಕೆ ಮನನೊಂದು ಶನಿವಾರ ಸಂಜೆ ಹೃದಯಾಘಾತದಿಂದ ದೈವಾಧೀನರಾಗಿರುವುದು ವಿಷಾದ ನೀಯ. ಇದರಿಂದ ನನ್ನ ಮನಸ್ಸು ಬಹಳ ನೊಂದಿದೆ.

ಇತರ ಪಕ್ಷಗಳ ದುರಾಡಳಿತಕ್ಕೆ ಬೇಸತ್ತು ರಾಜ್ಯದ ಲಕ್ಷಾಂತರ ಜನ ಇದೇ ರೀತಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಅಪೇಕ್ಷಿಸಿದ್ದರು.  ಸಾಕಷ್ಟು ಜನ ಬಿಜೆಪಿಗೆ ಹೀಗೆ ಆಗಬಾರದಿತ್ತು ಎಂದು ನೋವು ತೋಡಿಕೊಂಡಿದ್ದಾರೆ ಎಂದರು.

loader