Asianet Suvarna News Asianet Suvarna News

ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಬಗ್ಗೆ ಪಕ್ಷದಲ್ಲೇ ಅಸಮಾಧಾನ

ಕರ್ನಾಟಕ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸರ್ಕಾರ ರಚನೆ ಮಾಡುವ ಹಾದಿಯಲ್ಲಿದೆ. ಆದರೆ  ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್  ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BJP Will Form Govt In Karnataka Says prakash javadekar

ಬೆಂಗಳೂರು : ಕರ್ನಾಟಕ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸರ್ಕಾರ ರಚನೆ ಮಾಡುವ ಹಾದಿಯಲ್ಲಿದೆ. ಆದರೆ  ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್  ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ಈ 2 ಪಕ್ಷಗಳ ಮೈತ್ರಿ ಪಕ್ಷದಲ್ಲಿರುವ ಕೆಲವರಿಗೆ ಅಸಮಾಧಾನವನ್ನು ಉಂಟು ಮಾಡಿದೆ.  ಆದ್ದರಿಂದ ಹಲವು ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗಿಲ್ಲ. ನಾವು ಯಾರನ್ನೂ ಕೂಡ ಸೆಳೆಯುವ ಅಗತ್ಯವಿಲ್ಲ. ಅಲ್ಲಿ ಅಸಮಾಧಾನ ಇದ್ದವರು ನಮ್ಮ ಕಡೆ ಬರುತ್ತಾರೆ ಎಂದಿದ್ದಾರೆ. 

ಅಲ್ಲದೇ ಕುದುರೆ ವ್ಯಾಪಾರ ಮಾಡುವುದು ಬಿಜೆಪಿ ಜಾಯಮಾನವಲ್ಲ. ನಮ್ಮ ಪಕ್ಷದಲ್ಲಿ ಅಂತಹ ಸಂಸ್ಕೃತಿಯೂ ಇಲ್ಲ. ನಾವು ಯಾರಿಗೂ ಕೂಡ 100 ಕೋಟಿ ಹಣದ ಆಫರ್ ಮಾಡಿಲ್ಲ ಎಂದಿದ್ದಾರೆ. 

ಇನ್ನು ನಮ್ಮ ಪಕ್ಷ ರಾಜ್ಯದಲ್ಲಿ 104 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.  ಆದ್ದರಿಂದ ಇಲ್ಲಿ ಅಧಿಕಾರ ನಮ್ಮದೇ.  ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಹೀಗಿದ್ದು ಸರಕಾರ ರಚನೆಗೆ ಮುಂದಾಗಿದ್ದಾರೆ ಎಂದು ಜಾವ್ಡೇಕರ್ ತಿರುಗೇಟು ನೀಡಿದ್ದಾರೆ. 

100 ಕೋಟಿ ನೀಡಲು ಆಮಿಷ ಒಡ್ಡಲಾಗಿದೆ ಎಂದು ಕುಮಾರಸ್ವಾಮಿ ಆಧಾರವಿಲ್ಲದೇ ಆರೋಪ ಮಾಡುತ್ತಿದ್ದಾರೆ. ನಮಗೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಯಾರಾದರೂ ಕೋರ್ಟ್ ಗೆ ಹೋಗುವುದಾದರೆ ಅವರು ಹೋಗಲಿ. ಅವರಿಗೆ ಕೋರ್ಟ್ ನಲ್ಲೂ ಮುಖಭಂಗವಾಗುವುದು ನಿಶ್ಚಿತ ಈಗಾಗಲೇ ಕಾಂಗ್ರೆಸ್ ನಲ್ಲೇ  ಅಸಮಾಧಾನ ಎದ್ದಿದೆ‌.  ಸುಪ್ರೀಂ ಕೋರ್ಟ್ ಗೆ ಹೋದರೆ ಹೋಗಲಿ. ಪ್ರಜಾಪ್ರಭುತ್ವ ದಲ್ಲಿ ಅವರಿಗೆ ಈ ಹಕ್ಕು ಇರಬಹುದು. ಆದರೆ ಸರ್ಕಾರ ನಾವು ರಚನೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios