ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ವಿವಿಧ ರೀತಿಯ ಭರವಸೆಗಳನ್ನು ನೀಡಿದೆ. ರೈತರಿಗೆ ವಿವಿಧ ರೀತಿಯ ಸಾಲ ಮನ್ನಾ ಸೇರಿದಂತೆ ಅನೇಕ ಉಪಯುಕ್ತ ಯೋಜನೆಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ಪ್ರಮುಖವಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ರೈತರ ಬಗೆಗಿನ ಅಂಶಗಳು ಇಂತಿವೆ.

ಮೊದಲ ಸಂಪುಟ ಸಭೆಯಲ್ಲಿ ರಾಷ್ಟ್ರೀಕೃತ
ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿರುವ 1
ಲಕ್ಷ ರು. ವರೆಗಿನ ಬೆಳೆ ಸಾಲ ಮನ್ನಾ.

ನೇಗಿಲಯೋಗಿ ಯೋಜನೆ ಮೂಲಕ 20 ಲಕ್ಷ
ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರಿಗೆ
ತಲಾ 10 ಸಾವಿರ ರು ಆರ್ಥಿಕ ನೆರವು.

ಬೆಲೆ ವ್ಯತ್ಯಯ ವೇಳೆ ರೈತರ ಬೆಂಬಲಕ್ಕಾಗಿ ೫
ಸಾವಿರ ಕೋಟಿ ರು. ರೈತ ಬಂಧು ಆವರ್ತ ನಿಧಿ.


ರೈತ ಸ್ನೇಹಿ ಯೋಜನೆಗಳ ಅನುಷ್ಠಾನದ ಸೂಕ್ತ
ಮೇಲ್ವಿಚಾರಣೆಗಾಗಿ ಮುಖ್ಯಮಂತ್ರಿ
ಕಚೇರಿಯಡಿ ರೈತ ಬಂಧು ವಿಭಾಗ.


 ಭೂರಹಿತ ಕೃಷಿ ಕಾರ್ಮಿಕರಿಗೆ ಸುರಕ್ಷಾವಿಮೆ
ಯೋಜನೆ- ೨ ಲಕ್ಷದಷ್ಟು ಅಪಘಾತ ವಿಮೆ.

2025ರ ಒಳಗೆ ರಾಜ್ಯದ ಎಲ್ಲಾ ನೀರಾವರಿ
ಯೋಜನೆಗಳ ಪೂರ್ಣಕ್ಕೆ 1.5 ಲಕ್ಷ ಕೋಟಿ ರು.
‘ಸುಜಲಾಂ ಸುಫಲಾಂ ಕರ್ನಾಟಕ’ ಯೋಜನೆ.


ರೈತರ ಪಂಪ್ ಸೆಟ್‌ಗಳಿಗೆ ದಿನ 10 ಗಂಟೆಗಳ ಕಾಲ
ಮೂರು ಫೇಸ್ ವಿದ್ಯುತ್.

ರಾಜ್ಯದ ಎಲ್ಲಾ ಕೆರೆಗಳ ಪುನಶ್ಚೇತನಕ್ಕಾಗಿ ಮಿಶನ್
ಕಲ್ಯಾಣ ಯೋಜನೆ.

ಪ್ರತಿ ವರ್ಷ ಒಂದು ಸಾವಿರ ರೈತರು ಇಸ್ರೇಲ್
ಮತ್ತು ಚೀನಾ ಪ್ರವಾಸ.

ಕೆಎಂಎಫ್ ಮೂಲಕ ಹಣ್ಣು ಮತ್ತು ತರಕಾರಿಗಳ
ರಫ್ತಿನ ಉತ್ತೇಜನಕ್ಕಾಗಿ 3 ಸಾವಿರ ಕೋಟಿ ರು.

ಪಶು ಸಂಗೋಪನೆ, ಹೈನುಗಾರಿಕೆಗೆ ಬೇಕಾಗುವ
ಮೂಲಸೌಕರ್ಯ ಅಭಿವೃದ್ಧಿಗೆ 3 ಸಾವಿರ ಕೋಟಿ
ರು. ನಿಧಿ ‘ಕಾಮಧೇನು ಅನುದಾನ’.

ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ
ಕಾಯಿದೆ 2012ಕ್ಕೆ ಮರುಚಾಲನೆ.