ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್-ಜೆಡಿಎಸ್- ಬಿಜೆಪಿ ಸರ್ಕಸ್ ನಡೆಯುತ್ತಿದೆ. ಶತಾಯ ಗತಾಯ ಸರ್ಕಾರ ಮಾಡಿಯೇ ಸಿದ್ದ ಎಂದು ಹೊರಟಿರುವ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಆಪರೇಶನ್ ಕಮಲ ಶುರು ಮಾಡಿದೆ.
ಬೆಂಗಳೂರು (ಮೇ. 16): ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್-ಜೆಡಿಎಸ್- ಬಿಜೆಪಿ ಸರ್ಕಸ್ ನಡೆಯುತ್ತಿದೆ. ಶತಾಯ ಗತಾಯ ಸರ್ಕಾರ ಮಾಡಿಯೇ ಸಿದ್ದ ಎಂದು ಹೊರಟಿರುವ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಆಪರೇಶನ್ ಕಮಲ ಶುರು ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ಮೂಲಕ ಜೆಡಿಎಸ್‌ಗೆ ಗಾಳ ಹಾಕಲು ಹೊರಟಿದೆ. 3 ಜೆಡಿಎಸ್ ಶಾಸಕರ ಆಪರೇಷನ್‌ಗೆ ಬಸವರಾಜು ಹೊಣೆ ಹೊತ್ತಿದ್ದಾರೆ. ತಮ್ಮ ಭಾಗದ 3 ಜೆಡಿಎಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಜೆಡಿಎಸ್ ಶಾಸಕರು ನಿರಂತರವಾಗಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಅವರನ್ನು ನಾನು ಪಕ್ಷಕ್ಕೆ ಕರೆ ತರುತ್ತೇನೆ ಎಂದು ಬಿಎಸ್ ವೈಗೆ ಭರವಸೆ ನೀಡಿದ್ದಾರೆ. . ಒಂದು ಸುತ್ತಿನ ಮಾತುಕತೆ ಕೂಡ ಮುಗಿದಿದೆ ಎಂದು ಸುವರ್ಣನ್ಯೂಸ್‌ಗೆ ಬಿಜೆಪಿ ಉನ್ನತ ಮೂಲಗಳು ಮಾಹಿತಿ ನೀಡಿದೆ.
