ಬೆಂಗಳೂರು (ಏ. 27):  ಕೆಪಿಸಿಸಿಯ ಪ್ರಮುಖ ನಾಯಕರು ,ಕೆಲ ಶಾಸಕರು , ಸಚಿವರ ದೂರವಾಣಿ ಕದ್ದಾಲಿಕೆ ಆಗುತ್ತಿದೆ.  ಅಮಿತ್ ಶಾ ಸೂಚನೆ ಮೇರೆಗೆ ರಹಸ್ಯವಾಗಿ ಫೋನ್ ಟ್ಯಾಪಿಂಗ್  ನಡೆಯುತ್ತಿದೆ ಎಂದು  ರಾಮಲಿಂಗರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. 

ಕಳೆದ ಮೂರು ತಿಂಗಳಿಂದ ನಿರಂತರವಾಗಿ ಫೋನ್ ಕದ್ದಾಲಿಕೆ ನಡೆಯುತ್ತಿದೆ.  ದೆಹಲಿ, ಗುಜರಾತ್ ,ಜೈಪುರದಿಂದ ಮೂರು ತಂಡಗಳು ಕದ್ದಾಲಿಕೆ ಕೆಲಸದಲ್ಲಿ ತೊಡಗಿಕೊಂಡಿವೆ.   ಕನ್ನಡ ಬಲ್ಲ ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಸಂಘಟನೆಯ ಹುಡುಗರು ಇದರಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. 

ಚುನಾವಣೆ ದೃಷ್ಟಿಯಿಟ್ಟುಕೊಂಡು ಕಾಂಗ್ರೆಸ್ ಮುಖಂಡರ ಮನೆ ಮೇಲೆ  ಐಡಿ ದಾಳಿ   ಮಾಡಿಸಲಾಗುತ್ತಿದೆ.  ಒಂದು ಕಡೆ ಟೆಲಿಫೋನ್ ಕದ್ದಾಲಿಕೆ ಇನ್ನೊಂದು ಕಡೆ ಐಟಿ ರೈಡ್ ಮಾಡಿಸಲಾಗುತ್ತಿದೆ. ಐಟಿಯವರನ್ನ ಅವರ ಪಕ್ಷಕ್ಕೆ ಸೇರಿಸಿಕೊಳ್ಳಲಿ.  ಬಿಜೆಪಿ ಪಕ್ಷದದಲ್ಲಿರುವ ಸಾಕಷ್ಟು ಉದ್ಯಮಿಗಳ ಮೇಲೆ ಐಡಿ ರೈಡ್ ಮಾಡಲಿ.  ಮನೆಯಲ್ಲಿ ನೋಟು ಎಣಿಸುವ ಮಿಷನ್ ಇಟ್ಟುಕೊಂಡವರ ಮೇಲೆ ಐಟಿ ರೇಡ್ ಮಾಡಿಸಲಿ ಎಂದಿದ್ದಾರೆ. 

ಯಡಿಯೂರಪ್ಪ ಜೈಲಿಗೆ ಹೋಗಿದ್ದು, ಮೂವರೂ ಮಂತ್ರಿಗಳು ಜೈಲು ಸೇರಿದ್ದು, ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ್ದು ,ರೆಸಾರ್ಟ್ ಶಾಸಕರನ್ನ ಕೂಡಿ ಹಾಕಿದ್ದು , ಬಿಬಿಎಂಪಿಯನ್ನ ದಿವಾಳಿ ಮಾಡಿದ್ದು ಇವುಗಳ ಬಗ್ಗೆ ಬಿಜೆಪಿ ಯಾಕೆ ಜಾಹಿರಾತು ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.