ಸ್ಪೀಕರ್ ಹುದ್ದೆಗೆ ಬಿಜೆಪಿಯಿಂದಲೂ ನಾಮಪತ್ರ ಸಲ್ಲಿಕೆ

BJP Nomination filed for Speaker Post
Highlights

ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ರಮೇಶ್ ಕುಮಾರ್ ಅವರನ್ನು ಖಚಿತ ಮಾಡುತ್ತಿದ್ದಂತೆ  ಪ್ರತಿಪಕ್ಷ ಬಿಜೆಪಿ ಕೂಡಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದೆ.  ಹಿರಿಯ ಶಾಸಕ ಎಸ್ ಸುರೇಶ್ ಕುಮಾರ್ ವಿಧಾನಸಭಾ ಕಾರ್ಯದರ್ಶಿ ಮೂರ್ತಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

ಬೆಂಗಳೂರು (ಮೇ. 24): ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ರಮೇಶ್ ಕುಮಾರ್ ಅವರನ್ನು ಖಚಿತ ಮಾಡುತ್ತಿದ್ದಂತೆ  ಪ್ರತಿಪಕ್ಷ ಬಿಜೆಪಿ ಕೂಡಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದೆ.  ಹಿರಿಯ ಶಾಸಕ ಎಸ್ ಸುರೇಶ್ ಕುಮಾರ್ ವಿಧಾನಸಭಾ ಕಾರ್ಯದರ್ಶಿ ಮೂರ್ತಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

ಪಕ್ಷದ ವರಿಷ್ಟರು ಸೂಚನೆ ಕೊಟ್ಟಿದ್ದರಿಂದ ನಾಮಪತ್ರ ಸಲ್ಲಿಸಿದ್ದೇನೆ. ಸಂಖ್ಯಾಬಲ ಕಡಿಮೆಯಿದೆ ಅನ್ನೋದು ನಮಗೆ ಗೊತ್ತಿದೆ.  ನಾಳೆ ಮಧ್ಯಾಹ್ನದವರೆಗೂ ನೀವು ಕಾದು ನೋಡಿ ಎಂದು ನಾಮಪತ್ರ ಸಲ್ಲಿಸಿದ ಬಳಿಕ ಸುರೇಶ್ ಕುಮಾರ್ ಹೇಳಿದ್ದಾರೆ.  ಅತ್ತ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಕೂಡಾ ನಾಮಪತ್ರ ಸಲ್ಲಿಸಲಿದ್ದಾರೆ. 
 

loader