ಸಿಎಂಗೆ ತಿರುಗುಬಾಣವಾಗುತ್ತಾ ಲಿಂಗಾಯಿತ-ವೀರಶೈವ ಮತ ವಿಭಜನೆ?

First Published 27, Apr 2018, 12:43 PM IST
BJP Master Plan for Defeat CM in Badami
Highlights

ಬಾದಾಮಿಯಲ್ಲಿ ಸಿಎಂ ಸೋಲಿಸಲು ಬಿಜೆಪಿ ಬಿಗ್ ಪ್ಲಾನ್  ಮಾಡಿದೆ.  ಧರ್ಮ ವಿಭಜನೆ ಮಾಡಿರುವ ಸಿಎಂಗೆ ಬಾದಾಮಿಯಲ್ಲಿ ಬಿಜೆಪಿ ತೊಡೆ ತಟ್ಟಲು ಪ್ರತಿತಂತ್ರ ರೂಪಿಸಿದೆ. 

 

ಬಾಗಲಕೋಟೆ (ಏ. 27): ಬಾದಾಮಿಯಲ್ಲಿ ಸಿಎಂ ಸೋಲಿಸಲು ಬಿಜೆಪಿ ಬಿಗ್ ಪ್ಲಾನ್  ಮಾಡಿದೆ.  ಧರ್ಮ ವಿಭಜನೆ ಮಾಡಿರುವ ಸಿಎಂಗೆ ಬಾದಾಮಿಯಲ್ಲಿ ಬಿಜೆಪಿ ತೊಡೆ ತಟ್ಟಲು ಪ್ರತಿತಂತ್ರ ರೂಪಿಸಿದೆ. 

ವೀರಶೈವಮಠದ ಶಕ್ತಿ ಕೇಂದ್ರ ಶಿವಯೋಗಮಂದಿರ ಸ್ವಾಮೀಜಿಯೊಂದಿಗೆ ಶ್ರೀರಾಮುಲು ಗೌಪ್ಯ ಮಾತುಕತೆ ನಡೆಸಿದ್ದಾರೆ. ‌ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಹಾಗೂ ಡಾ. ಸಂಗನಬಸವ ಸ್ವಾಮೀಜಿ ಗೌಪ್ಯ ಮಾತುಕತೆ ನಡೆಸಿದ್ದಾರೆ. ‌‌ವೀರಶೈವ -ಲಿಂಗಾಯತ ಧರ್ಮ ಒಡೆದಿರುವ ಅಸ್ತ್ರ ಪ್ರಯೋಗಿಸಲು  ಬಿಜೆಪಿ ಮುಖಂಡರು ಮುಂದಾಗಿದ್ದಾರೆ.  ವೀರಶೈವ- ಲಿಂಗಾಯತ ಮತಬ್ಯಾಂಕ್ ಗಟ್ಟಿಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಗೌಪ್ಯ ಮಾತುಕತೆ ನಡೆಸಿದ್ದಾರೆ. 

ವೀರಶೈವ ಲಿಂಗಾಯತ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಲು ಸೂಚನೆ‌ ನೀಡಲಾಗಿದೆ.  ಶ್ರೀರಾಮುಲು ಜೊತೆ ಸಂಸದ ಪಿ ಸಿ ಗದ್ದಿಗೌಡರ,ಮಾಜಿ ಶಾಸಕರಾದ ಎಂ ಕೆ ಪಟ್ಟಣ ಶೆಟ್ಟಿ, ರಾಜಶೇಖರ್ ಶೀಲವಂತರ, ಮುಖಂಡ, ಮಹಾಂತೇಶ್ ಮಮದಾಪೂರ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. 
 

loader