ಬೆಂಗಳೂರು (ಮೇ. 04): ಬಿಜೆಪಿ ಚುನಾವಣಾ ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಹೆಸರಿನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಮುರುಳೀಧರ್ ರಾವ್,  ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರಣಾಳಿಕೆ ಬಿಡುಗಡೆಯಲ್ಲಿ ಉಪಸ್ಥಿತರಿದ್ದರು.  ಪ್ರಣಾಳಿಕೆ ಬಿಡುಗಡೆಗೂ ಮುನ್ನ ನಿನ್ನೆ ನಿಧನ ಹೊಂದಿದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್’ಗೆ ಸಂತಾಪ ಸೂಚಿಸಿದರು. 

ಪ್ರಣಾಳಿಕೆಯಲ್ಲಿ ಏನೇನಿದೆ? 

ಒಂದು ಲಕ್ಷದವರೆಗೆ ರೈತರ ರಾಷ್ಟ್ರೀಕೃತ ಬ್ಯಾಂಕ್’ಗಳಲ್ಲಿ ಸಾಲ ಮನ್ನಾ
ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರಿಗೆ ಸ್ಮಾರ್ಟ್ ಫೋನ್ 
ಗೋ ಹತ್ಯೆ ನಿಷೇಧ ಕಾಯ್ದೆಗೆ ಮರು ಚಾಲನೆ 
ಗೋ ಸೇವಾ ಆಯೋಗ ಪುನರ್ ಆರಂಭ 
75 ಸಾವಿರದಿಂದ 1 ಲಕ್ಷದವರೆಗೆ ರೇಷ್ಮೆ ಸಬ್ಸಿಡಿ 
ಭಾಗ್ಯಲಕ್ಷ್ಮೀ ಯೋಜನೆಗೆ 2 ಲಕ್ಷ ಏರಿಕೆ 
ಕೆಎಂಎಫ್ ಮೂಲಕ ರಫ್ತಿಗೆ ಆದ್ಯತೆ 
ಶೇ. 1 ರಷ್ಟು ಬಡ್ಡಿದರದಲ್ಲಿ ಸ್ತ್ರೀಶಕ್ತಿ ಸಂಘಕ್ಕೆ ಸಾಲ 
1 ಲಕ್ಷ ಕೋಟಿ ನೀರಾವರಿಗೆ ಕೆರೆ ಕಟ್ಟೆ ತುಂಬಿಸುತ್ತೇವೆ 
ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್’ಟ್ಯಾಪ್ 
ಜಿಲ್ಲೆಗೆ 3, ತಾಲೂಕಿಗೆ 1 ಅನ್ನಪೂರ್ಣ ಕ್ಯಾಂಟೀನ್ 
100  ಕೋಟಿ ವೆಚ್ಚದಲ್ಲಿ ರೈತ ಬಂಧು ಯೋಜನೆ 
ವಿವಾಹ ಮಂಗಲ ಯೋಜನೆಯಲ್ಲಿ ಬಿಪಿಎಲ್ ಯುವತಿಯರಿಗೆ ೨೫ ಸಾವಿರ