ಮಾಜಿ ಸಚಿವ ಸೇರಿದಂತೆ ಬಿಜೆಪಿ ನಾಯಕರ ಸಾಮೂಹಿಕ ರಾಜೀನಾಮೆ

BJP Leaders Mass Resignation Karnataka Assembly Election 2018
Highlights

ಮಾಜಿ ಸಚಿವ ಬಿಜೆಪಿ ಮುಖಂಡ ಬಸವರಾಜ ಪಾಟೀಲ್ ಅಟ್ಟೂರ, ಪುತ್ರ ಲಿಂಗರಾಜ ಪಾಟೀಲ್ ಅಟ್ಟೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಪಾಟೀಲ್, ಪಕ್ಷದ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರದೀಪ ವಾತಡೆ ಬಿಜೆಪಿಗೆ ಇಂದು ರಾಜೀನಾಮೆ ನೀಡಿದರು.

ಬೀದರ್ (ಏ.24): ಮಾಜಿ ಸಚಿವ ಬಸವರಾಜ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ರಾಜೀನಾಮೆಗೆ ನಿರ್ಧರಿಸಿದ್ದಾರೆ. ಇತ್ತೀಚಿಗೆ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿರುವುದನ್ನು ವಿರೋಧಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಮಾಜಿ ಸಚಿವ ಬಿಜೆಪಿ ಮುಖಂಡ ಬಸವರಾಜ ಪಾಟೀಲ್ ಅಟ್ಟೂರ, ಪುತ್ರ ಲಿಂಗರಾಜ ಪಾಟೀಲ್ ಅಟ್ಟೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಪಾಟೀಲ್, ಪಕ್ಷದ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರದೀಪ ವಾತಡೆ ಬಿಜೆಪಿಗೆ ಇಂದು ರಾಜೀನಾಮೆ ನೀಡಿದರು.

loader