Asianet Suvarna News Asianet Suvarna News

ಜನಾರ್ದನ ರೆಡ್ಡಿ ಕನಸು ಭಗ್ನ : ಸುಪ್ರೀಂ ಶಾಕ್

ಈಗಾಗಲೇ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಪ್ರತೀ ಪಕ್ಷದಲ್ಲಿಯೂ ಕೂಡ ಪ್ರಮುಖ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೇ ರೀತಿ ಚುನಾವಣಾ ಪ್ರಚಾರದಲ್ಲಿ ತೊಡಗುವ ಕನಸು ಹೊತ್ತಿದ್ದ ಜನಾರ್ದನ ರೆಡ್ಡಿಗೆ ನಿರಾಸೆಯಾಗಿದೆ.

BJP leader G Janardhan Reddy cant campaign for his brother in Karnataka

ಬೆಂಗಳೂರು : ಈಗಾಗಲೇ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಪ್ರತೀ ಪಕ್ಷದಲ್ಲಿಯೂ ಕೂಡ ಪ್ರಮುಖ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೇ ರೀತಿ ಚುನಾವಣಾ ಪ್ರಚಾರದಲ್ಲಿ ತೊಡಗುವ ಕನಸು ಹೊತ್ತಿದ್ದ ಜನಾರ್ದನ ರೆಡ್ಡಿಗೆ ನಿರಾಸೆಯಾಗಿದೆ.

ಬಳ್ಳಾರಿಯಲ್ಲಿ ಎರಡು ದಿನ ಸಹೋದರ ಸೋಮಶೇಖರ ರೆಡ್ಡಿ ಪರ ಚುನಾವಣಾ ಪ್ರಚಾರಕ್ಕೆ ಅನುಮತಿ ಕೋರಿ  ರೆಡ್ಡಿ ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.  ಆದರೆ ಇದೀಗ ಈ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್  ಚುನಾವಣಾ ಪ್ರಚಾರದಲ್ಲಿ ತೊಡಗದಂತೆ ಆದೇಶ ನೀಡಿದೆ.

ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಸಹೋದರನ ಪರ ಪ್ರಚಾರಕ್ಕೆ ಇಳಿಯುವ ಕನಸು ಹೊತ್ತಿದ್ದರು. ಚುನಾವಣಾ ಪ್ರಚಾರಕ್ಕಾಗಿಯೇ ಮೊಳಕಾಲ್ಮೂರಿನಲ್ಲಿ ಮನೆ ಮಾಡಿಕೊಂಡಿದ್ದು, ಅವರ ಕನಸಿಗೆ ಇದೀಗ ನೀರೆರಚಿದಂತಾಗಿದೆ. 

ಇನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಿಜೆಪಿ ನಾಯಕ ಅಥವಾ ಸ್ಟಾರ್ ಪ್ರಚಾರಕರಲ್ಲ. ಅವರ ವಿರುದ್ಧದ ಪ್ರಕರಣದಲ್ಲಿ ನಿರಾಪರಾಧಿ ಆಗುವವರೆಗೆ ಬಿಜೆಪಿಗೆ ಎಂಟ್ರಿ ಇಲ್ಲ ಎಂದು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಹೇಳಿದ್ದಾರೆ. ಅಲ್ಲದೆ ಅವರು ಬಿಜೆಪಿ ಪ್ರಚಾಋ ಕಾರ್ಯದಲ್ಲಿ ಕಂಡು ಬಂದಲ್ಲಿ ತಮಗೆ ವಾಟ್ಸಾಪ್ ಮಾಡಬೇಕೆಂದು ಹೇಳಿದ್ದಾರೆ.   ಬಿಜೆಪಿಯೂ ಕೂಡ ಅವರನ್ನು ಜಾಗರೂಕತೆಯಿಂದ ನಿಭಾಯಿಸಲು ಮುಂದಾಗಿ ರೆಡ್ಡಿ ವಿವಾದದಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

Follow Us:
Download App:
  • android
  • ios