ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲವೂ ಮನ್ನಾ : ಬಿಎಸ್ ವೈ

First Published 29, Apr 2018, 1:49 PM IST
BJP Election Manifesto Release On Monday
Highlights

ಬಿಜೆಪಿ ತನ್ನ ಪ್ರಣಾಳಿಕೆಯನ್ನು ಸೋಮವಾರ ಪ್ರಕಟಿಸಲಿದ್ದು, ರಾಷ್ಟ್ರೀಕೃತ ಬ್ಯಾಂಕಲ್ಲಿರುವ ರೈತರ ಸಾಲ ಮನ್ನಾ ಮಾಡುವ ಅಂಶವನ್ನು ಪ್ರಣಾಳಿಕೆ ಹೊಂದಿರಲಿದೆ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.  ಯಡಿಯೂರಪ್ಪ ಭರವಸೆ ಇತ್ತಿದ್ದಾರೆ.

ಧಾರವಾಡ: ಈಗಾಗಲೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ವಿವಿಧ ರೀತಿಯಾದ ಅಭಿವೃದ್ಧಿಯ ಭರವಸೆಗಳನ್ನು ನೀಡಿದೆ. ರೈತರ ಅಭಿವೃದ್ಧಿ, ಉದ್ಯೋಗ , ನೀರಾವರಿ ಯೋಜನೆಗಳು ಸೇರಿದಂತೆ ಅನೇಕ ರೀತಿಯ ವಾಗ್ದಾನಗಳನ್ನು ಇತ್ತಿದೆ. 

ಇದೀಗ ಬಿಜೆಪಿಯೂ ಕೂಡ ತನ್ನ ತನ್ನ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಮಾಡಿದ್ದು,  ತನ್ನ ಪ್ರಣಾಳಿಕೆಯನ್ನು ಸೋಮವಾರ ಪ್ರಕಟಿಸಲಿದೆ.  ರಾಷ್ಟ್ರೀಕೃತ ಬ್ಯಾಂಕಲ್ಲಿರುವ ರೈತರ ಸಾಲ ಮನ್ನಾ ಮಾಡುವ ಅಂಶವನ್ನು ಪ್ರಣಾಳಿಕೆ ಹೊಂದಿರಲಿದೆ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.  ಯಡಿಯೂರಪ್ಪ ಭರವಸೆ ಇತ್ತಿದ್ದಾರೆ.
ಜಿಲ್ಲೆಯ ಕುಂದಗೋಳದಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್, ಸೊಸೈಟಿ ಸಾಲವನ್ನು ಮನ್ನಾ ಮಾಡುವ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ.

ಆಲಮಟ್ಟಿ ಜಲಾಶಯ ಎತ್ತರ, ಆ ಭಾಗದ ರೈತರಿಗೆ ಪರಿಹಾರ, ನರಗುಂದ ಮತ್ತು ನವಲಗುಂದ ಭಾಗದ ರೈತ ಸಮುದಾಯ ಬೇಡಿಕೆ ಈಡೇರಿಸುತ್ತೇವೆ. ಹೀಗಾಗಿ ಪ್ರಣಾಳಿಕೆ ಬಿಡುಗಡೆ ಬಳಿಕ ಹೆಚ್ಚಿನ ರೈತರ ಮತಗಳು ನಮಗೆ ಬೀಳಲಿದ್ದು ಒಟ್ಟಾರೆಯಾಗಿ ಶೇ.4ರಷ್ಟು ಹೆಚ್ಚುವರಿ ಮತಗಳು ಬಿಜೆಪಿಗೆ ಬರಲಿವೆ ಎಂದರು.

loader