Asianet Suvarna News Asianet Suvarna News

ಬಿಎಂಟಿಸಿ - ಮೆಟ್ರೋ ಸೇವೆಯ ವಿಸ್ತರಣೆ

ನಿನ್ನೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಹಲವು ರೀತಿಯ ಭರವಸೆಗಳನ್ನು ನೀಡಿದೆ. ಪ್ರಮುಖವಾಗಿ ರೈತರು, ಸಾಮಾನ್ಯ  ವರ್ಗ, ಬೆಂಗಳೂರಿಗೆ ವಿವಿಧ ಕೊಡುಗೆಗಳನ್ನು ನೀಡುವುದಾಗಿ ಹೇಳಿಕೊಂಡಿದೆ.

BJP Election Manifesto Plans

ಬೆಂಗಳೂರು : ಬೆಂಗಳೂರು ಮಹಾನಗರ ವಲಯದ ಎಲ್ಲ ನಗರ ಪ್ರದೇಶಗಳಿಗೆ ಹಂತ ಹಂತವಾಗಿ ಮೆಟ್ರೋ ವಿಸ್ತರಣೆ. ನೇರಳೆ ಮಾರ್ಗವನ್ನು ಕಾಡುಗೋಡಿ ಮೂಲಕ ಹೊಸ ಕೋಟೆ ಬಸ್ ನಿಲ್ದಾಣದವರೆಗೆ ಹಾಗೂ ಮತ್ತೊಂದು ಭಾಗದಲ್ಲಿ ಕೆಂಗೇರಿ ಮೂಲಕ ಬಿಡದಿ ಬಸ್ ನಿಲ್ದಾಣ ದವರೆಗೂ ವಿಸ್ತಾರ. ಆರ್ .ವಿ. ರಸ್ತೆಯಿಂದ ಬೊಮ್ಮ ಸಂದ್ರದವರೆಗಿನ ಮಾರ್ಗವನ್ನು ಅತ್ತಿಬೆಲೆವರೆಗೆ ವಿಸ್ತ ರಣೆ. ವಿಮಾನ ನಿಲ್ದಾಣದವರೆಗಿನ ಮೆಟ್ರೋ ಸಂಪರ್ಕ ವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುತ್ತದೆ. 

ಕೋರಮಂಗಲದ ಮೂಲಕ ಬಿಟಿಎಂ  ಲೇಔಟ್ ನಿಂದ ಇಂದಿರಾನಗರಕ್ಕೆ, ವರ್ತೂರು ಮೂಲಕ ಬೊಮ್ಮಸಂದ್ರದಿಂದ ಕಾಡುಗೋಡಿಗೆ, ಬೈರಮಂಗಲ ಹಾಗೂ ಇನ್ನೋವೇಟಿವ್ ಫಿಲ್ಮ್ ಸಿಟಿ ಮೂಲಕ ಹಾರೋಹಳ್ಳಿಯಿಂದ ಬಿಡದಿವರೆಗೂ ಟರ್ಮಿನಲ್ ಸಂಪರ್ಕ ಮಾರ್ಗಗಳ ನಿರ್ಮಾಣ. ಮೈಸೂರು ರಸ್ತೆ, ಸುಮ್ಮನಹಳ್ಳಿ, ಯಶವಂತಪುರ, ನಾಗವಾರ, ಕೆ.ಆರ್. ಪುರ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗವಾಗಿ  ಪುಟ್ಟೇನಹಳ್ಳಿ ಕ್ರಾಸ್‌ನಿಂದ ಆರಂಭಿಸಿ ಆರ್.ವಿ. ರಸ್ತೆವರೆಗೆಹೊರ ವರ್ತುಲ ಮಾರ್ಗ ನಿರ್ಮಾಣ. ಕೇಂದ್ರ ಸರ್ಕಾರ ಘೋಷಿಸಿದ 17 ಸಾವಿರ ಕೋಟಿ ಬಳಸಿ ಬೆಂಗಳೂರು ಉಪನಗರ ರೈಲು ಜಾಲಗಳನ್ನು ಪೂರ್ಣಗೊಳಿಸಲು ‘ಬಿ-ರೈಡ್’ ಸ್ಥಾಪನೆ ಮಾಡವುದಾಗಿ ಹೇಳಿದೆ. 

ಬಿಎಂಟಿಸಿ ಬಸ್ ಸಂಖ್ಯೆ ದ್ವಿಗುಣಗೊಳಿಸಲಾಗು ವುದು. ಬಿಎಂಟಿಸಿ ಮಿನಿ ಬಸ್ ಸೇವೆ ಪ್ರಾರಂಭ. ಡಿಜಿಸಿಎ ಜತೆ ಮಾತುಕತೆ ನಡೆಸಿ ನಗರದೊಳಗೆ, ನಗರಕ್ಕೆ ಹಾಗೂ ನಗರದಿಂದ ಪರಸ್ಪರಕ್ಕೆ ಹೆಚ್ಚಿನ ಸಂಖ್ಯೆಯ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಟಾರ್ಟ್‌ಅಪ್ ಕಂಪನಿಯ ಸಹಭಾಗಿ ತ್ವದಲ್ಲಿ ದೊಡ್ಡಮಟ್ಟದಲ್ಲಿ ಆರ್ಥಿಕ ಚಟುವಟಿಕೆ ನಡೆಯುವ ಪ್ರದೇಶದಲ್ಲಿ ಬೈಸಿಕಲ್ ಹಬ್‌ಗಳನ್ನು ಸ್ಥಾಪಿಸಲಾಗು ವುದು ಎಂದು ತಿಳಿಸಲಾಗಿದೆ. 

Follow Us:
Download App:
  • android
  • ios