ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದರ ಹಿಂದೆ ಬಿಜೆಪಿ ‘ಕೈ’ ವಾಡ

BJP Denied Vijayendra Varuna Ticket
Highlights

ವರುಣಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುತ್ತಾರೆ ಎಂದು ಬಿಎಸ್ ವೈ ಪುತ್ರ ವಿಜಯೇಂದ್ರಗೆ ಕೊನೆ ಕ್ಷಣದಲ್ಲಿ ಅಲ್ಲಿನ ಟಿಕೆಟ್ ಕೈ ತಪ್ಪಿತ್ತು. ಇದರ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಕೖವಾಡವಿದೆ ಎಂದು ಇದೀಗ ಮಾಜಿ ಸಿಎಂ ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರು : ವರುಣಾ ಕ್ಷೇತ್ರದಲ್ಲಿ  ಬಿಎಸ್’ವೈ ಪುತ್ರ ವಿಜಯೇಂದ್ರಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದು, ಇದರ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿ  ಕೈವಾಡವಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಮಾಜಿ ಹಾಗೂ ಹಾಲಿ ಸಿಎಂ ಪುತ್ರರಾದ ವಿಜಯೇಂದ್ರ ಹಾಗೂ ಯತೀಂದ್ರ  ನಡುವಿನ ಕುಸ್ತಿ ಅಖಾಡವಾಗಲಿದೆ ಎಂದು ನಂಬಲಾಗಿದ್ದ  ವರುಣಾ ಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆಯಾಗಿತ್ತು. ತಮ್ಮ ಪುತ್ರ ವಿಜಯೇಂದ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ವತಃ ಯಡಿಯೂರಪ್ಪ ಅವರೇ ಘೋಷಿಸಿದ್ದರು. 
 
ಇದೀಗ ವಿಜಯೇಂದ್ರ ಟಿಕೆಟ್ ನೀಡದಿರುವ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಮತ್ತು ಕಾಂಗ್ರೆಸ್ ಒಳ ಒಪ್ಪಂದದಿಂದಲೇ ಟಿಕೆಟ್  ಸಿಕ್ಕಿಲ್ಲ ಎಂದು ಹೇಳಿದ್ದಾರೆ. 

ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಬಿಜೆಪಿ ಅಭ್ಯರ್ಥಿ ಚುನಾವಣೆಗೆ ನಾಲ್ಕು ದಿನ ಮುಂಚಿತನಾಗಿ ನಾಪತ್ತೆಯಾಗಿದ್ದರು. ಈಗ ನಾಮಪತ್ರ ಸಲ್ಲಿಕೆಗಿಂತ ಮುಂಚಿತವಾಗಿಯೇ ಈ ಒಪ್ಪಂದ ಆಗಿದೆ.  ಇಂತಹ ಬೆಳವಣಿಗೆಗಳಿಂದ ನಮಗೆ ಅನುಕೂಲವಾಗಲಿದೆ. ಇಂತಹ ಬೆಳವಣಿಗೆಗಳಿಂದ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಈ ಬಾರಿ ಹೆಚ್ಚಿನ ಅನುಕೂಲ ಆಗಲಿದೆ ಎಂದು ಕುಮಾರಸ್ವಾಮಿ  ಹೇಳಿದ್ದಾರೆ. 

ಮತದಾನ ನಿಮ್ಮ ಹಕ್ಕು, ನಿಮ್ಮ ಜವಾಬ್ದಾರಿ ಕೂಡಾ | ತಪ್ಪದೇ ಮತ ಹಾಕಿ – ಮೇ 12, 2018

loader