ಕಾಂಗ್ರೆಸ್ ಪ್ರಣಾಳಿಕೆಗೆ ಬಿಜೆಪಿ ಟಾಂಗ್! ’ಕೈ’ ಗೆ ಉಲ್ಟಾ ಹೊಡೆದ ಬಿಜೆಪಿ

BJP Counter Attack on Congress on Manifesto
Highlights

ಕಾಂಗ್ರೆಸ್ ಪ್ರಣಾಳಿಕೆಗೆ  ಕಿರು ಹೊತ್ತಿಗೆ ಮೂಲಕ ಬಿಜೆಪಿ ಟಾಂಗ್ ನೀಡಿದೆ. 

"ಸುಳ್ಳುಗಳ ಸರದಾರ, ಸಿದ್ದು ಸರಕಾರ ಕಾಂಗ್ರೆಸ್ ಪ್ರಣಾಳಿಕೆಯ ಕ್ರಾಸ್ ಚೆಕ್ " ಎಂಬ ಶೀರ್ಷಿಕೆಯ ಕಿರುಹೊತ್ತಿಗೆಯನ್ನು  ಬಿಜೆಪಿ ಬಿಡುಗಡೆ ಮಾಡಿದೆ.  ಜಾಹೀರಾತಿನಲ್ಲೇ‌ ನೀರು ಹರಿಸಿದ ಸರ್ಕಾರ,  ಇಂಧನ ಮತ್ತು ವಿದ್ಯುತ್ ಪೂರೈಕೆಯಲ್ಲಿ ಶಾಕ್ ನೀಡಿದ ಸರ್ಕಾರ,  ಕಣ್ಣಿಗೆ ಮಣ್ಣೆರಚಿ ಮರಳು‌ ಮಾಡಿದ ಸರ್ಕಾರ,  ನೈಸ್ ವರದಿ ಧೂಳು ತಿನ್ನಲು ಇದೇ‌ ಕಾರಣ.

ಬೆಂಗಳೂರು (ಏ. 27): ಕಾಂಗ್ರೆಸ್ ಪ್ರಣಾಳಿಕೆಗೆ  ಕಿರು ಹೊತ್ತಿಗೆ ಮೂಲಕ ಬಿಜೆಪಿ ಟಾಂಗ್ ನೀಡಿದೆ. 

"ಸುಳ್ಳುಗಳ ಸರದಾರ, ಸಿದ್ದು ಸರಕಾರ ಕಾಂಗ್ರೆಸ್ ಪ್ರಣಾಳಿಕೆಯ ಕ್ರಾಸ್ ಚೆಕ್ " ಎಂಬ ಶೀರ್ಷಿಕೆಯ ಕಿರುಹೊತ್ತಿಗೆಯನ್ನು  ಬಿಜೆಪಿ ಬಿಡುಗಡೆ ಮಾಡಿದೆ. 

ಜಾಹೀರಾತಿನಲ್ಲೇ‌ ನೀರು ಹರಿಸಿದ ಸರ್ಕಾರ,  ಇಂಧನ ಮತ್ತು ವಿದ್ಯುತ್ ಪೂರೈಕೆಯಲ್ಲಿ ಶಾಕ್ ನೀಡಿದ ಸರ್ಕಾರ,  ಕಣ್ಣಿಗೆ ಮಣ್ಣೆರಚಿ ಮರಳು‌ ಮಾಡಿದ ಸರ್ಕಾರ,  ನೈಸ್ ವರದಿ ಧೂಳು ತಿನ್ನಲು ಇದೇ‌ ಕಾರಣ. ಕಸ ಪೇರಿಸುವುದೇ ನಗರಾಭಿವೃದ್ಧಿ! ಎಂದು ಬಿಜೆಪಿ ವ್ಯಂಗ್ಯವಾಡಿದೆ. 

ಶಿಕ್ಷಣವನ್ನು ‌ಕುಲಗೆಡಿಸಿದ ಕಾಂಗ್ರೆಸ್ ಸರ್ಕಾರ, ಸೇವಾ ವಂಚಿತ ಆರೋಗ್ಯ ಸರ್ಕಾರ,  ಅವೈಜ್ಞಾನಿಕ ವಿತರಣೆಯೇ ಆಹಾರ ಭದ್ರತೆಯ ನೀತಿ,  ಸಂಸ್ಕೃತಿ, ಪ್ರವಾಸೋದ್ಯಮಕ್ಕೂ ಇಲ್ಲ‌ ಪ್ರೋತ್ಸಾಹ. ಕಮಿಷನ್ ನಿಗದಿಯೇ ಕಾಂಗ್ರೆಸ್‌ನ ಸಮಾಜ ಕಲ್ಯಾಣ ಎಂದು ಟಾಂಗ್ ನೀಡಿದೆ. 

ಅಲ್ಪ ಸಂಖ್ಯಾತರ ಒಳಿತಿಗೆ ಅಲ್ಪತನ ತೋರಿದ ಕಾಂಗ್ರೆಸ್,  ಕಾಂಗ್ರೆಸ್ ನ ಕಿರುಕುಳ ‌ಪೊಲೀಸರ ಕಳವಳ,  ಬ್ಯಾಂಕ್ ಎಂಬ ಬೆಣ್ಣೆ ಸವರಿದ ಕಾಂಗ್ರೆಸ್,  ಸೋರುತ್ತಿರುವ ಬಂಡವಾಳ, ಸಿದ್ದು ಸರ್ಕಾರ ಸುಳ್ಳು ಜಾಹೀರಾತುಗಳ ಸರದಾರ ಎಂದು ಬಿಜೆಪಿ ಲೇವಡಿ ಮಾಡಿದೆ. 
 

loader