ಬೆಂಗಳೂರು(ಮೇ.03): ಚುನಾವಣಾ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಜಯನಗರ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಸ್ವಸ್ಥ ಬಿ.ಎನ್. ವಿಜಯ್ ಕುಮಾರ್ ಅಸ್ವಸ್ಥಗೊಂಡಿದ್ದಾರೆ.
ತಕ್ಷಣ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿದೆ.  ಜಯನಗರ 4ನೇ ಟಿ ಬ್ಲಾಕ್'ನಲ್ಲಿ ಪಾದಯಾತ್ರೆ ಮಾಡುತ್ತಿದ್ದಾಗ  ಅಸ್ವಸ್ಥಗೊಂಡಿದ್ದಾರೆ. ೨ ತಿಂಗಳ ಹಿಂದೆಯೂ ಉಸಿರಾಟ ತೊಂದರೆಯಿಂದ  ವಿಜಯ್ ಕುಮಾರ್ ಚಿಕಿತ್ಸೆ ಪಡೆದಿದ್ದರು. ಸತತ ೨ ಬಾರಿಯಿಂದ ಜಯನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ಸ್ಪರ್ಧೆ ಹೆಚ್ಚು ಪೈಪೋಟಿಯಾಗಿದ್ದು ಕಾಂಗ್ರೆಸ್'ನಿಂದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಕಣಕ್ಕಿಳಿದಿದ್ದಾರೆ. ಜೆಡಿಎಸ್'ನಿಂದ ತನ್ವೀರ್ ಅಹ್ಮದ್ ಸ್ಪರ್ಧಿಸಿದ್ದಾರೆ. ಸಾಮಾಜಿಕ ಹೋರಾಟಗಾರ ರವಿಕೃಷ್ಣ ರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಕುತೂಹಲ ಮೂಡಿಸಿದೆ.