ನವದೆಹಲಿ :  ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಸಂಬಂಧ ಹಾಗೂ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆ ಬೇಡವೇ ಎನ್ನುವ ವಿಚಾರದ ಸಂಬಂಧ ರಾತ್ರಿ ಪೂರ್ತಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದೆ. ರಾಜಕೀಯದ ಬಗ್ಗೆ ರಾತ್ರಿ ಪೂತ್ರಿ  ವಿಚಾರಣೆ ನಡೆಯುವ ಮೂಲಕ ಇದೊಂದು ಐತಿಹಾಸಿಕ ಘಟನೆಯಾಗಿ ದಾಖಲಾಗಿದೆ. ಬಳಿಕ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಅನುಮತಿ ನೀಡಲಾಗಿದೆ.


ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ವಾದ ಮಂಡನೆ
ಬಿಜೆಪಿ ಮತ್ತು ರಾಜ್ಯಪಾಲರ ಮಧ್ಯೆ ಯಾವ ಮಾತುಕತೆ ನಡೆದಿದೆ ಅನ್ನೋದು ಗೊತ್ತಿಲ್ಲ
 ಬಿಜೆಪಿ ನೀಡಿರುವ ಬೆಂಬಲ ಪತ್ರ ನೀಡುವಂತೆ ಕೇಳಿದ ಸುಪ್ರೀಂ ಕೋರ್ಟ್​
ನಾನು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದೇನೆ
ಬಿಜೆಪಿ ರಾಜ್ಯಪಾಲರಿಗೆ ನೀಡಿರುವ ಪತ್ರದ ಬಗ್ಗೆ ನನಗೆ ಗೊತ್ತಿಲ್ಲ
ರಾಜ್ಯಪಾಲರಿಗೆ ಕಾಂಗ್ರೆಸ್​ ನೀಡಿರುವ ಪತ್ರದ ಎಲ್ಲ ಸಹಿಗಳು ಅಸಲಿಯೇ
ಸುಪ್ರೀಂ ಕೋರ್ಟ್​ನಲ್ಲಿ ಕೇಂದ್ರದ ಪರ ಅಟಾರ್ನಿ ಜನರಲ್ ಪ್ರಶ್ನೆ
117 ಶಾಸಕರ ಸಹಿಗಳು ಅಸಲಿಯೇ ಎಂದು ಪ್ರಶ್ನಿಸಿದ ಅಟಾರ್ನಿ ಜನರಲ್
ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಿದ್ದು ಯಾಕೆ ಎಂದು ಕೋರ್ಟ್​ ಪ್ರಶ್ನೆ
15 ದಿನ ಬಹುಮತ ಸಾಬೀತಿಗೆ ಯಾಕೆ ಅವಕಾಶ ನೀಡಬಾರದು ಎಂದು ಅಟಾರ್ನಿ ಜನರಲ್ ಮರುಪ್ರಶ್ನೆ
15 ದಿನಗಳಲ್ಲಿ ಆಕಾಶ ಬಿದ್ದು ಹೋಗುವುದಿಲ್ಲ ಎಂದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್
15 ದಿನ ಬಹುಮತ ಸಾಬೀತಿಗೆ ಅವಕಾಶ ನೀಡಿರುವುದು ರಾಜ್ಯಪಾಲರ ಪರಮಾಧಿಕಾರ
ಒಂದು ವೇಳೆ ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸದಿದ್ದರೆ ಏನು ಮಾಡುವುದು..?
ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್​ಗೆ ಸುಪ್ರೀಂ ಕೋರ್ಟ್​ ಪ್ರಶ್ನೆ
ವಿಶ್ವಾಸಮತ ಪರೀಕ್ಷೆ ಮುಗಿಯುವವರೆಗೂ ಕಾಂಗ್ರೆಸ್ ಕಾಯಬೇಕು- ಅಟಾರ್ನಿ ಜನರಲ್
ವಿಶ್ವಾಸಮತದ ನಂತರ ಕಾಂಗ್ರೆಸ್ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಿ

ನ್ಯಾಯಮೂರ್ತಿಗಳಿಂದ ಕಾಂಗ್ರೆಸ್ ಗೆ ಪ್ರಶ್ನೆ
ಯಾವುದೇ ಪಕ್ಷಕ್ಕೂ ಚುನಾವಣೆಯಲ್ಲಿ ಬಹುಮತ ಸಿಕ್ಕಿಲ್ಲ
ಕಾಂಗ್ರೆಸ್​ ಮತ್ತು ಜೆಡಿಎಸ್ ಚುನಾವಣಾ ಪೂರ್ವದಲ್ಲಿ ಮೈತ್ರಿ ಆಗಿಲ್ಲ
ಗೋವಾ ಪ್ರಕರಣದ ತೀರ್ಪು ಉಲ್ಲೇಖಿಸಿದ ಸಿಂಘ್ವಿಗೆ ನ್ಯಾಯಮೂರ್ತಿಗಳಿಂದ ಪ್ರಶ್ನೆ
ಸುಪ್ರೀಂ ಕೋರ್ಟ್​ ಗೋವಾ ರಾಜ್ಯಪಾಲರ ನಿರ್ಣಯ ಒಪ್ಪಿಕೊಂಡಿತ್ತು ಎಂದಿದ್ದ ಸಿಂಘ್ವಿ
ಯಡಿಯೂರಪ್ಪ ಬಹುಮತ ಸಾಬೀತುಪಡಿಸಲ್ಲ ಎಂದು ಯಾವ ಆಧಾರದಲ್ಲಿ ಹೇಳುತ್ತೀರಾ..?
ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷ, ಕಾಂಗ್ರೆಸ್​ ಮತ್ತು ಜೆಡಿಎಸ್ ಎರಡನೇ ಮತ್ತು ಮೂರನೇ ಪಕ್ಷವಾಗಿವೆ
ಅತಿ ದೊಡ್ಡ ಪಕ್ಷವಾದ ಬಿಜೆಪಿಯೇ ಅಧಿಕಾರ ರಚಿಸಬೇಕಲ್ಲವೇ..? 
ಅಭಿಕಷೇಕ್​ ಮನು ಸಿಂಘ್ವಿಗೆ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಎಕೆ ಸಿಕ್ರಿ ಪ್ರಶ್ನೆ
ಬಿಜೆಪಿಯ ವಾದವನ್ನೂ ಆಲಿಸೋಣ ಎಂದ ನ್ಯಾಯಮೂರ್ತಿ ಎ.ಕೆ ಸಿಕ್ರಿ
ನಮ್ಮ ಮುಂದೆ ಯಾವ ಆಯ್ಕೆಗಳಿವೆ ಎಂದು ತಿಳಿಯಲು ಬಯಸಿದ ನ್ಯಾಯಮೂರ್ತಿ ಬೋಬ್ಡೆ
ರಾಜ್ಯಪಾಲರ ನಿರ್ಧಾರವನ್ನು ಸಂವಿಧಾನದ 361ನೇ ವಿಧಿಯಡಿ ತಡೆಯಬಹುದಾ..?
ರಾಜ್ಯಪಾಲರ ನಿರ್ಧಾರವನ್ನು ಸುಪ್ರೀಂ ಕೋರ್ಟ್​ ಪ್ರಶ್ನಿಸಿದರೆ ಹೇಗೆ ಎಂಬ ಬಗ್ಗೆ ಚರ್ಚೆ
ಮೂವರು ನ್ಯಾಯಮೂರ್ತಿಗಳ ಮಧ್ಯೆ ಚರ್ಚೆ
ರಾಜ್ಯಪಾಲರ ನಿರ್ಧಾರಕ್ಕೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ
ಪ್ರಮಾಣ ವಚನ ಸಮಾರಂಭಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದ ತ್ರಿಸದಸ್ಯ ಪೀಠ
ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಿ ಬಿಜೆಪಿಗೆ ಅವಕಾಶ ನೀಡಿದ್ದಾರೆ
ಬಿಜೆಪಿಗೆ ಬಹುಮತ ಇದೆಯಾ ಎಂಬ ಬಗ್ಗೆಯೂ ನೋಡಬೇಕಾಗುತ್ತದೆ
ಎರಡೂ ಪಕ್ಷಗಳು ರಾಜ್ಯಪಾಲರಿಗೆ ಕೊಟ್ಟಿರುವ ಬಹುಮತದ ಪತ್ರ ನಿಮ್ಮಲ್ಲಿದೆಯೇ.?
ರಾಜ್ಯಪಾಲರಿಗೆ ಬಿಎಸ್​ ಯಡಿಯೂರಪ್ಪ ಅವರು ಬರೆದಿರುವ ಪತ್ರ ನಿಮ್ಮಲ್ಲಿದೆಯೇ..?
ಪತ್ರವಿಲ್ಲದೇ ನಾವು ಮಧ್ಯಪ್ರವೇಶಿಸುವುದು ಹೇಗೆ ಎಂದು ಸಿಂಘ್ವಿಗೆ ಪ್ರಶ್ನಿಸಿದ ಕೋರ್ಟ್
ಸಂವಿಧಾನದ ವಿಧಿ 361ರ ಪ್ರಕಾರ ರಾಜ್ಯಪಾಲರ ಪರಮಾಧಿಕಾರ ಪ್ರಶ್ನಿಸಲು ಸಾಧ್ಯವಿಲ್ಲ
ರಾಜ್ಯಪಾಲರ ನಿರ್ಧಾರಕ್ಕೆ ತಡೆ ನೀಡಲು ಅಸಾಧ್ಯ ಎಂದ ಸುಪ್ರೀಂ ಕೋರ್ಟ್​ನ ತ್ರಿಸದಸ್ಯ ಪೀಠ


ಅಭಿಷೇಕ್ ಮನು ಸಿಂಘ್ವಿ ವಾದ
ರಾಜ್ಯಪಾಲರಿಂದ ಅಸಾಂವಿಧಾನಿಕ ನಿರ್ಧಾರ
ಬಿಜೆಪಿ ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆಗೆ ಮುಂದಾಗಿದೆ
ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿರುವುದು ಕಾನೂನು ಬಾಹಿರ
ಕಾಂಗ್ರೆಸ್​ ಪರ ವಕೀಲ ಅಭಿಷೇಕ್ ಮನು ಸಿಂಘ್ವಿಯಿಂದ ವಾದ ಮಂಡನೆ
ಬಿಎಸ್​ವೈ ಬಹುಮತ ಸಾಬೀತಿಗೆ ಎರಡು ದಿನ ಅವಕಾಶ ಕೇಳಿದ್ದಾರೆ
ಆದರೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ
ಕಾಂಗ್ರೆಸ್​ಗೆ 117 ಶಾಸಕರ ಬಲವಿದೆ, ಬಿಜೆಪಿಗೆ 104 ಶಾಸಕರ ಬಲವಷ್ಟೇ ಇದೆ ಎಂದು ವಾದ
ಸಂವಿಧಾನದ ವಿಧಿ 14ರ ಪ್ರಕಾರ ರಾಜ್ಯಪಾಲರ ನಿರ್ಣಯ ಕಾನೂನು ಬಾಹಿರ ಎಂದು ಕಾಂಗ್ರೆಸ್ ವಾದ
ರಾಮೇಶ್ವರ ಪ್ರಸಾದ್ ಮತ್ತು ಬೊಮ್ಮಾಯಿ ಪ್ರಕರಣ ಉಲ್ಲೇಖಿಸಿದ ಅಭಿಷೇಕ್ ಮನು ಸಿಂಘ್ವಿ
ಸರ್ಕಾರಿಯಾ ವರದಿ ಉಲ್ಲೇಖಿಸಿದ ಅಭಿಷೇಕ್​ ಮನು ಸಿಂಘ್ವಿ
ಇಷ್ಟು ಕಡಿಮೆ ಸಮಯದಲ್ಲಿ ಪ್ರಮಾಣವಚನ ಸ್ವೀಕಾರದ ಅವಶ್ಯಕತೆ ಏನಿತ್ತು..?
ಗೋವಾ ಮತ್ತು ಮಣಿಪುರದಲ್ಲಿ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿರಲಿಲ್ಲ
ರಾಜ್ಯಪಾಲರ ನಿರ್ಧಾರವನ್ನು ಪುನರ್ ಪರಿಶೀಲಿಸಲು ಸಾಧ್ಯವೇ ಎಂದು ಸಿಂಘ್ವಿ ಮನವಿ
ಎರಡೂ ಪಕ್ಷಗಳ ಚುನಾವಣೋತ್ತರ ಮೈತ್ರಿಯನ್ನು ರಾಜ್ಯಪಾಲರು ಪರಿಗಣಿಸಬೇಕಿತ್ತು
ರಾಜ್ಯಪಾಲರ ನಿರ್ಧಾರವೂ ಮರುಪರಿಶೀಲನೆಗೆ ಅರ್ಹವಾದ ವಿಚಾರ ಎಂದ ಸಿಂಘ್ವಿ
ರಾಷ್ಟ್ರಪತಿ ಆಡಳಿತಕ್ಕೇ ತಡೆ ನೀಡುವ ಅಧಿಕಾರ ಸುಪ್ರೀಂ​ಗೆ ಇದ್ದರೆ ರಾಜ್ಯಪಾಲರ ನಿರ್ಣಯಕ್ಕೇಕಿಲ್ಲ
ಬಿಎಸ್​ವೈ ಪ್ರಮಾಣವಚನ ಮುಂದೂಡುವಂತೆ ಆದೇಶ ನೀಡಿ ಎಂದು ಸಿಂಘ್ವಿ ಮನವಿ
ಪ್ರಮಾಣವಚನ ಮುಂದೂಡುವುದು ರಾಜ್ಯಪಾಲರ ನಿರ್ಣಯ ಮುಂದೂಡಿದಂತೆ ಆಗುವುದಿಲ್ಲ
ಎರಡು ದಿನಗಳ ಕಾಲ ಬಿಎಸ್​ವೈ ಪ್ರಮಾಣವಚನ ಮುಂದೂಡುವಂತೆ ಸಿಂಘ್ವಿ ಮನವಿ
ರಾಜ್ಯಪಾಲರ ನಿರ್ಧಾರವನ್ನು ತಡೆಯಬೇಡಿ, ಬಿಎಸ್​ವೈ ಪ್ರಮಾಣವಚನ ತಡೆಯಿರಿ

ಮುಕುಲ್​ ರೋಹ್ಟಗಿ ವಾದ
ಗೋವಾದಲ್ಲಿ ನಿರ್ಮಾಣವಾಗಿದ್ದ ಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿಲ್ಲ
ರಾಜ್ಯಪಾಲರು ಬಿಜೆಪಿಯನ್ನು ಆಮಂತ್ರಿಸಿರುವುದು ಕಾನೂನು ಪ್ರಕಾರವಾಗಿಯೇ ಇದೆ
ರಾಜ್ಯಪಾಲರು ತಮ್ಮ ವಿವೇಚನೆ ಮತ್ತು ಅಧಿಕಾರ ಬಳಸಿ ಈ ನಿರ್ಧಾರ ಕೈಗೊಂಡಿದ್ದಾರೆ
ರಾಜ್ಯಪಾಲರ ಪರ ಮುಕುಲ್​ ರೋಹ್ಟಗಿ ಪ್ರತಿವಾದ ಮಂಡನೆ
ರಾಜ್ಯಪಾಲರ ನಿರ್ಧಾರಕ್ಕೆ ತಡೆ ನೀಡುವುದು ಸರಿಯಲ್ಲ
ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನಿಸುವುದು ರಾಜ್ಯಪಾಲರ ಹಕ್ಕು
ಕಾನೂನಿನ ಅಡಿಯಲ್ಲಿ ಸರ್ಕಾರ ರಚನೆಗೆ ಆಹ್ವಾನಿಸುವುದು ರಾಜ್ಯಪಾಲರ ಪರಮಾಧಿಕಾರ
ಪ್ರಮಾಣ ವಚನಕ್ಕೆ ಸುಪ್ರೀಂ ಕೋರ್ಟ್​ ಯಾವುದೇ ಕಾರಣಕ್ಕೂ ತಡೆ ನೀಡಬಾರದು
ರಾಜ್ಯಪಾಲರ ನಿರ್ಧಾರಕ್ಕೆ ತಡೆ ನೀಡುವುದು ಅಸಾಧ್ಯ ಎಂದ ಮುಕುಲ್​ ರೋಹ್ಟಗಿ
ಮಧ್ಯರಾತ್ರಿ ವಿಚಾರಣೆಗೆ ಮುಕುಲ್ ರೋಹ್ಟಗಿ ಆಕ್ಷೇಪ
ಯಾಕೂಬ್​ ಮೆಮನ್ ಪ್ರಕರಣವನ್ನು ಮಧ್ಯರಾತ್ರಿ ವಿಚಾರಣೆ ಮಾಡಲಾಗಿತ್ತು
ಮಧ್ಯರಾತ್ರಿ ವಿಚಾರಣೆ ನಡೆಸುವಷ್ಟು ಗಂಭೀರ ಪ್ರಕರಣ ಇದಲ್ಲ
ಬೆಳಗಿನ ಜಾವ ನಾಲ್ಕು ಗಂಟೆ ಸಮಯದಲ್ಲಿ ಈ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ
ಕಾಂಗ್ರೆಸ್ ಮತ್ತು ಜೆಡಿಎಸ್​ ಅರ್ಜಿಯನ್ನು ವಜಾಗೊಳಿಸುವಂತೆ ಮುಕುಲ್ ರೋಹ್ಟಗಿ ಮನವಿ
ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ
ಕಾಂಗ್ರೆಸ್​ ವಿರುದ್ಧ ಸುಪ್ರೀಂ ಕೋರ್ಟ್​ನಲ್ಲಿ ಗಂಭೀರ ಆರೋಪ ಮಾಡಿದ ಮುಕುಲ್ ರೋಹ್ಟಗಿ
ರಾಜ್ಯಪಾಲರ ಪ್ರಮಾಣವಚನ ಬೋಧಿಸುವುದು ರಾಜ್ಯಪಾಲರ ಕರ್ತವ್ಯ
ರಾಜ್ಯಪಾಲರ ಕರ್ತವ್ಯವನ್ನು ತಡೆಯಲು ಸಾಧ್ಯವಿಲ್ಲ
ಮುಕುಲ್​ ರೋಹ್ಟಗಿ ವಾದ

ಸುಪ್ರೀಂಕೋರ್ಟ್ ನಲ್ಲಿ ಮಧ್ಯರಾತ್ರಿ  ಹೈಡ್ರಾಮಾ
ಯಡಿಯೂರಪ್ಪ ಪ್ರಮಾಣ ವಚನಕ್ಕೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಗ್ರೀನ್ ಸಿಗ್ನಲ್
ರಾಜ್ಯಪಾಲರಿಗೆ ನೀಡಿರುವ ಬೆಂಬಲ ಪತ್ರದ ಪ್ರತಿ ನೀಡುವಂತೆ ಸೂಚನೆ
ಬರೋಬ್ಬರಿ ಮೂರೂವರೆ ಗಂಟೆ ವಿಚಾರಣೆ ನಡೆಸಿದ ಕೋರ್ಟ್