ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತೆ ಕೆಣಕಿದ ಪ್ರಧಾನಿ ನರೇಂದ್ರ ಮೋದಿ, ಟ್ರಕ್ ಗಳಲ್ಲಿ ಕುಕ್ಕರ್'ಗಳು ಪತ್ತೆಯಾದ ಬಗ್ಗೆ ಏನಂತೀರಾ ಸಿದ್ದರಾಮಯ್ಯ. ಕುಕ್ಕರ್ ಗಳಲ್ಲಿ ಕಾಂಗ್ರೆಸ್ ನಾಯಕರ ಫೋಟೋಗಳು ಪತ್ತೆ ಆಗಿಬಿಟ್ಟಿವೆ. ಬಾದಾಮಿಯಲ್ಲಿ ಸಿಎಂ ತಂಗಿದ್ದ ರೆಸಾರ್ಟ್ ನಲ್ಲಿ ಹಣವೂ ಸಹ ಸಿಕ್ಕಿವೆ. ಇದೆಲ್ಲಾ ಏನು ಸ್ವಾಮಿ ಎಂದು ಪ್ರಶ್ನಿಸಿದರು. 

ಬೆಳಗಾವಿ(ಮೇ.09): ಕುಂದ ನಗರಿ ಬೆಳಗಾವಿಯನ್ನು ಕರ್ನಾಟಕದ ಇನ್ನೊಂದು ರಾಜಧಾನಿ ಎಂದು ಹೇಳಿದ ಪ್ರಧಾನಿ ಮೋದಿ ಹೇಳಿದರು.
ಬೆಳಗಾವಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬೆಳಗಾವಿಯನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿಗಾಗಿ ಗುರಿ ತೊಟ್ಟಿದ್ದೇವೆ. ಡೈರೆಕ್ಟ್ ಬೆನಿಫಿಟ್ಸ್ ಸ್ಕೀಮ್ ಅಡಿಯಲ್ಲಿ ದೇಶದ ಜನರಿಗೆ ನೆರವು ನೀಡಲಾಗುವುದು' ಎಂದು ಹೇಳಿದರು
ಟ್ರಕ್'ನಲ್ಲಿ ಕುಕ್ಕರ್ 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತೆ ಕೆಣಕಿದ ಪ್ರಧಾನಿ ನರೇಂದ್ರ ಮೋದಿ, ಟ್ರಕ್ ಗಳಲ್ಲಿ ಕುಕ್ಕರ್'ಗಳು ಪತ್ತೆಯಾದ ಬಗ್ಗೆ ಏನಂತೀರಾ ಸಿದ್ದರಾಮಯ್ಯ. ಕುಕ್ಕರ್ ಗಳಲ್ಲಿ ಕಾಂಗ್ರೆಸ್ ನಾಯಕರ ಫೋಟೋಗಳು ಪತ್ತೆ ಆಗಿಬಿಟ್ಟಿವೆ. ಬಾದಾಮಿಯಲ್ಲಿ ಸಿಎಂ ತಂಗಿದ್ದ ರೆಸಾರ್ಟ್ ನಲ್ಲಿ ಹಣವೂ ಸಹ ಸಿಕ್ಕಿವೆ. ಇದೆಲ್ಲಾ ಏನು ಸ್ವಾಮಿ ಎಂದು ಪ್ರಶ್ನಿಸಿದರು. 
ಏನೆಲ್ಲಾ ಲೂಟಿ ಹೊಡೆದಿದ್ದಾರಾ ಎಲ್ಲವನ್ನು ವಾಪಸ್ ಕಕ್ಕಿಸುವ ಕಾಲ ಇದು. ನಾನು ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಅವರು ಇಲ್ಲಿ ಹೋಗಿದ್ದರು,ಇವರು ಅಲ್ಲಿ ಹೋಗಿದ್ದರು ಎನ್ನುವ ಸುಳ್ಳು. ಇದೆಲ್ಲವೂ ಸಹ ಕಾಂಗ್ರೆಸ್ ಪಕ್ಷದ ಸುಳ್ಳುಗಳ ಸರಮಾಲೆಯ ಕುಕೃತ್ಯ. ಆದ್ದರಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಜನರೆಲ್ಲರೂ ಹುಷಾರಾಗಿರಿ ಎಂದು ಎಚ್ಚರಿಸಿದರು.