ಬಂಗಾರಪ್ಪ ಪುತ್ರರಿಬ್ಬರ ನಡುವೆ ಸೊರಬದಲ್ಲಿ ಜಟಾಪಟಿ

First Published 7, May 2018, 1:22 PM IST
Bangarappa Sons Contest Election
Highlights

 ಬಂಗಾರಪ್ಪ ಅವರ ಪರಂಪರೆ ಮುಂದುವರಿಸ ಬಯಸುವ ಅವರ ಇಬ್ಬರು ಪುತ್ರರು 4ನೇ ಬಾರಿ ಸೊರಬದಲ್ಲಿ  ಖಾಮುಖಿಯಾಗಿದ್ದಾರೆ.  ಬಂಗಾರಪ್ಪ ಅವರ ಪರಂಪರೆ ಮುಂದುವರಿಸ ಬಯಸುವ ಅವರ ಇಬ್ಬರು ಪುತ್ರರು 4ನೇ ಬಾರಿ ಸೊರಬದಲ್ಲಿ  ಮುಖಾಮುಖಿಯಾಗಿದ್ದಾರೆ. 

ಸೊರಬ : ಬಂಗಾರಪ್ಪ ಅವರ ಪರಂಪರೆ ಮುಂದುವರಿಸ ಬಯಸುವ ಅವರ ಇಬ್ಬರು ಪುತ್ರರು 4ನೇ ಬಾರಿ ಸೊರಬದಲ್ಲಿ  ಮುಖಾಮುಖಿಯಾಗಿದ್ದಾರೆ. ಇದುವರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುತ್ತಿದ್ದ ಕುಮಾರ್ ಬಂಗಾರಪ್ಪ ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. 

ಮತ್ತೊಬ್ಬ ಪುತ್ರ ಹಾಲಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿ. ಅಭ್ಯರ್ಥಿ ಕೊರತೆ ಎದುರಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಡಿಸೆಂಬರ್‌ನಲ್ಲಿ ಬಿಜೆಪಿ ತೊರೆದು ಪಕ್ಷ ಸೇರಿದ್ದ ರಾಜು ಎಂ.ತಲ್ಲೂರು ಅವರನ್ನು ಕಣಕ್ಕಿಳಿಸಿದೆ. ಈ ಬಾರಿ ಸೊರಬ ಜನತೆ ಅಭಿವೃದ್ಧಿ ವಿಷಯ ಪ್ರಮುಖವಾಗಿಟ್ಟುಕೊಂಡಿದ್ದಾರೆ.

ಎಷ್ಟು ಬಾರಿ ಬಂಗಾರಪ್ಪ ಅವರ ಋಣ ತೀರಿಸಬೇಕು, ನಮಗೆ ಅಭಿವೃದ್ಧಿ ಬೇಕು ಎನ್ನುತ್ತಿದ್ದಾರೆ. ಅದಕ್ಕೆ ಮೂವರು ಅಭ್ಯರ್ಥಿಗಳಲ್ಲೂ ವಿಷಯಗಳಿವೆ. ಇಲ್ಲಿ ಈಡಿಗರೇ ಬಹುಸಂಖ್ಯಾತರು. ಲಿಂಗಾಯತರೂ ನಿರ್ಣಾಯಕರೇ. ಮಡಿವಾಳ, ಗಂಗಾಮತಸ್ಥರ ಸಂಖ್ಯೆಯೂ ಕಡಿಮೆ ಏನಿಲ್ಲ.

loader