ರಾಮನಗರ: ಜೆಡಿಎಸ್ ಸ್ಟಾರ್ ಪ್ರಚಾರಕಿ ಚಿತ್ರನಟಿ ಪೂಜಾ ಗಾಂಧಿ ಯಾರ ಪರ ಚುನಾವಣಾ ಪ್ರಚಾರ ನಡೆಸಿದ್ದಾರೋ ಅವರೆಲ್ಲರು ಸೋಲು ಅನುಭವಿಸಿದ್ದಾರೆ. ಒಂದರ್ಥದಲ್ಲಿ ಪೂಜಾ ಗಾಂಧಿಯವರದು ಐರನ್ ಲೆಗ್ ಎಂದು ಮಾಗಡಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು. 

ಕಳೆದ ಬಾರಿ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿಗಳು ಸೋಲುತ್ತಾರೆಂಬ ಕಾರಣಕ್ಕೆ ಪೂಜಾ ಗಾಂಧಿ ಜೆಡಿಎಸ್‌ನಲ್ಲಿದ್ದಾಗ ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಾಕೀತು ಮಾಡಿದ್ದರು. 

ಸೋಲಾಗುತ್ತದೆ ಎಂಬ ಕಾರಣಕ್ಕೆ ಈಗ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಪೂಜಾ ಗಾಂಧಿ ಅವರನ್ನು ಕಳುಹಿಸಿಲ್ಲ. ಬದಲಿಗೆ ಮಾಗಡಿಗೆ ಕಳುಹಿಸಿದ್ದಾರೆ ಎಂದು ವ್ಯಂಗ್ಯವಾಡಿದರು.