ಸಿಎಂ ಆಪ್ತ ಬಾಗೂರು ಮಂಜೇಗೌಡಗೆ ಸಂಕಷ್ಟ

First Published 6, May 2018, 8:19 AM IST
Baguru mAnje gowda Face Problem
Highlights

ಸಿಎಂ ಆಪ್ತ ಬಾಗೂರು ಮಂಜೇಗೌಡಗೆ ಸಂಕಷ್ಟ ಎದುರಾಗಿದ್ದು, ಅವರ ಮೇಲೆ ಹಿಂದಿನ‌ ದಿನಾಂಕ‌ ನಮೂದಿಸಿ‌‌ ರಾಜೀನಾಮೆ ಅಂಗೀಕಾರ ಮಾಡಿರುವ ಆರೋಪ ಎದುರಾಗಿದೆ. 

ಹಾಸನ : ಸಿಎಂ ಆಪ್ತ ಬಾಗೂರು ಮಂಜೇಗೌಡಗೆ ಸಂಕಷ್ಟ ಎದುರಾಗಿದ್ದು, ಅವರ ಮೇಲೆ ಹಿಂದಿನ‌ ದಿನಾಂಕ‌ ನಮೂದಿಸಿ‌‌ ರಾಜೀನಾಮೆ ಅಂಗೀಕಾರ ಮಾಡಿರುವ ಆರೋಪ ಎದುರಾಗಿದೆ. 

ಬಾಗೂರು ಮಂಜೇಗೌಡ, ಹೊಳೆನರಸೀಪುರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಮಂಜೇಗೌಡ ರಾಜೀನಾಮೆಯನ್ನು ‌ಹಳೇ‌ ದಿನಾಂಕ‌ ನಮೂದಿಸಿ ಅಂಗೀಕರಿಸಲಾಗಿದೆ. ಇದು ಕಾನೂನು ಬಾಹಿರ ಎಂದು ಪ್ರಶ್ನಿಸಿ ಹಾಸನದ‌ ಕೆಲವರು ಹೈಕೋರ್ಟ್ ‌ಮೆಟ್ಟಿಲೇರಿದ್ದರು.

ಸದ್ಯ ಈ ಸಂಬಂಧ ಮಂಜೇಗೌಡ ರಾಜೀನಾಮೆ ಅಂಗೀಕಾರವು ಈ‌ ಕೇಸಿನ‌ ಅಂತಿಮ‌ ತೀರ್ಪಿಗೆ ಒಳ ಪಟ್ಟಿರುತ್ತದೆ. ಇದಕ್ಕೆ‌ ಎರಡೂ ಕಡೆಯವರು ಬದ್ಧರಾಗಿರಬೇಕು ಎಂದು ಹೈ ಕೋರ್ಟ್ ಹೇಳಿದೆ. 

ಒಂದು ವೇಳೆ ರಾಜೀನಾಮೆ ‌ಅಂಗೀಕಾರ ಅಮಾನ್ಯ ಎಂದು ನ್ಯಾಯಾಲಯ ‌ತೀರ್ಪಿತ್ತರೆ ಮಂಜೇಗೌಡಗೆ ಸಂಕಷ್ಟ ಎದುರಾಗಲಿದ್ದು, ಆಗ ರಾಜಕೀಯ ಭವಿಷ್ಯವೂ ಕೂಡ ಡೋಲಾಯಮಾನ‌ವಾಗುವ  ಸಾಧ್ಯತೆ ಇದೆ.

loader