ಮಂಡ್ಯ (ಮೇ. 08):  ದೇವೆಗೌಡರಿಗೆ ಹಾಕಲಾಗಿದ್ದ  ಸೇಬಿನ ಹಾರ ಹರಾಜಿನಲ್ಲಿ 5 ಲಕ್ಷಕ್ಕೆ ಮಾರಾಟವಾಗಿದೆ. 

ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್‌ಗೌಡ ಮತಯಾಚನೆಗೆ  ಮದ್ದೂರು ತಾಲೂಕು ಕೊಪ್ಪಕ್ಕೆ  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ತಮಗೆ ಹಾಕಿದ್ದ ಸೇಬಿನ ಹಾರವನ್ನು ಬಹಿರಂಗ ಹರಾಜು ಹಾಕಿದ್ದರು. 

ಸುರೇಶ್‌ಗೌಡ ಅವರ ಚುನಾವಣಾ ಖರ್ಚಿಗೆ ಆಗುತ್ತದೆಂದು ಸೇಬಿನ ಹಾರ ಹರಾಜು ಹಾಕಿದರು.  ಬಹಿರಂಗ ಹರಾಜಿನಲ್ಲಿ  ಜಿಪಂ ಅಧ್ಯಕ್ಷೆ  ನಾಗರತ್ನಸ್ವಾಮಿ 6 ಲಕ್ಷಕ್ಕೆ ಪಡೆದರು.  ಸೇಬು ಹಣ್ಣನ್ನು ಕಾರ್ಯಕ್ರಮ ಬಂದಿದ್ದ ಜನರಿಗೆ ಹಂಚಿದ್ದಾರೆ.  
25 ಸಾವಿರ ಮೌಲ್ಯದ ಸೇಬಿನ ಹಾರ 6 ಲಕ್ಷಕ್ಕೆ ಮಾರಾಟವಾಗಿದೆ.