ಎಂಇಪಿ ಅಧ್ಯಕ್ಷೆ ಮೇಲೆ ಕಲ್ಲು ತೂರಾಟ

Attack On MEP President
Highlights

ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯ (ಎಂಇಪಿ) ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಕ್ ಅವರು ಸರ್ವಜ್ಞನಗರ  ವಿಧಾನಸಭಾ ಕ್ಷೇತ್ರದ ಗೋವಿಂದಪುರದಲ್ಲಿ ಮತ ಪ್ರಚಾರದಲ್ಲಿ ತೊಡಗಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಬೆಂಗಳೂರು :  ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯ (ಎಂಇಪಿ) ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಕ್ ಅವರು ಸರ್ವಜ್ಞನಗರ  ವಿಧಾನಸಭಾ ಕ್ಷೇತ್ರದ ಗೋವಿಂದಪುರದಲ್ಲಿ ಮತ ಪ್ರಚಾರದಲ್ಲಿ ತೊಡಗಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆಯಲ್ಲಿ ಎಂಇಪಿಯ ದಾವಣಗೆರೆಯ ಮುಖಂಡ ಅಸಾವುಲ್ಲ ಸೇರಿ 8 ಮಂದಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮಹಿಳಾ ಎಂಪವರ್ ಮೆಂಟ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ನಾಯಕಿ ನೌಹೀರಾ ಶೇಕ್ ಅವರು ಕೂದಲೆಳೆ ಅಂತರದಲ್ಲಿ ಪರಾಗಿದ್ದಾರೆ. ನೌಹೀರಾ ಶೇಕ್ ಅವರು ಗುರುವಾರ ಸಂಜೆ ಏಳು ಗಂಟೆ ಸುಮಾರಿಗೆ ಸರ್ವಜ್ಞನಗರ ಪಕ್ಷದ ಅಭ್ಯರ್ಥಿ ಸಿದ್ದಾಯತ್ ಉಲ್ಲಾ ಅವರ ಪರವಾಗಿ ತೆರೆದ ವಾಹನದಲ್ಲಿ ಪ್ರಚಾರ ನಡೆಸುತ್ತಿದ್ದರು.

ಇವರಿಗೆ ಬಿಟಿಎಂ ಲೇಔಟ್ ಕ್ಷೇತ್ರದ ಅಭ್ಯರ್ಥಿ ನರ್ಸ್ ಜಯಲಕ್ಷ್ಮೀ ಸೇರಿ ಹಲವರು ಸಾಥ್ ನೀಡಿದ್ದರು.  ನೌಹೀರ್ ಶೇಕ್, ಜಯಲಕ್ಷ್ಮೀ ಹಾಗೂ ಮುಖಂಡರಿದ್ದ ವಾಹನ ಗೋವಿಂದಪುರದ ಮುಖ್ಯದ್ವಾರದ ಬಳಿ ಬಂದಿದೆ. ಘೋಷಣೆ ಕೂಗುತ್ತಾ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿದ್ದ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಮುಖಂಡರನ್ನು ರಕ್ಷಿಸಿ ಸುರಕ್ಷಿತವಾಗಿ ಸ್ಥಳದಿಂದ ಕರೆದೊಯ್ದಿದ್ದಾರೆ. ಈ ವೇಳೆ ಅಸಾವುಲ್ಲಾ ಸೇರಿ ೮ ಮಂದಿಗೆ ಗಂಭೀರವಾಗಿದೆ.

ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ವಿಡಿಯೋ ಚಿತ್ರೀಕರಣಕ್ಕೆ ಮುಂದಾದ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಮೇಲೂ ಕೂಡ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದೆ.  ಸಿ.ವಿ.ರಾಮನ್‌ನಗರದ ಪ್ರಚಾರ ವೇಳೆ ಪಾಲ್ಗೊಂಡಿದ್ದ ಬಾಲಿವುಡ್ ನಟ ಸಲ್ಮಾನ್‌ಖಾನ್ ಸಹೋದರರಾದ ನಟ ಅಬ್ರಾಸ್ ಖಾನ್, ಸೋಹಿಲ್ ಖಾನ್, ಈಜ್ ಖಾನ್ ಹಾಗೂ ಸೋನುಸೂದ್ ಗೋವಿಂದಪುರ ಬರುವ ಮೊದಲು ನಿರ್ಗಮಿಸಿದ್ದರು. ಈ ವೇಳೆ ಗೋವಿಂದಪುರದಲ್ಲಿ ಎಂಇಪಿ  ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

loader