ರಮಾನಾಥ್ ರೈ ಆಪ್ತನ ಮೇಲೆ ದುಷ್ಕರ್ಮಿಗಳಿಂದ ದಾಳಿ

First Published 11, May 2018, 9:59 AM IST
Attack on Congress Leader Sanjeev Pujari
Highlights

ಸಚಿವ ರಮಾನಾಥ ರೈ ಆಪ್ತನ ಮೇಲೆ ಕೊಲೆ ಯತ್ನ ನಡೆದಿದೆ.  ಕಾಂಗ್ರೆಸ್ ಮುಖಂಡ ಸಂಜೀವ್ ಪೂಜಾರಿ ಕಾರು ಹಾಗೂ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.  ಸಂಜೀವ್ ಪೂಜಾರಿ, ಪತ್ನಿ ವಾಸಂತಿ ಪೂಜಾರಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.  

ಮಂಗಳೂರು (ಮೇ. 11): ಸಚಿವ ರಮಾನಾಥ ರೈ ಆಪ್ತನ ಮೇಲೆ ಕೊಲೆ ಯತ್ನ ನಡೆದಿದೆ.  

ಕಾಂಗ್ರೆಸ್ ಮುಖಂಡ ಸಂಜೀವ್ ಪೂಜಾರಿ ಕಾರು ಹಾಗೂ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.  ಸಂಜೀವ್ ಪೂಜಾರಿ, ಪತ್ನಿ ವಾಸಂತಿ ಪೂಜಾರಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.  

ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ 15 ರಿಂದ 20 ಜನರ ತಂಡ  ಸಂಜೀವ್ ಪೂಜಾರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.  ಕಾರಿನಲ್ಲಿ ಸಂಜೀವ್ ಪೂಜಾರಿ ಮನೆಗೆ ವಾಪಸ್ಸಾಗುತ್ತಿದ್ದ  ವೇಳೆ ಅವರ ಕಾರಿನ ಮೇಲೆಯೂ ದಾಳಿ ನಡೆಸಿದ್ದಾರೆ. 

ಸ್ಥಳಕ್ಕೆ ಬಂಟ್ವಾಳ ಪೊಲೀಸರು ಆಗಮಿಸಿದ್ದಾರೆ.  ಬಿಜೆಪಿಗರಿಂದ ಕೊಲೆ ಯತ್ನ ಎಂದು  ರಮಾನಾಥ ರೈ ಆರೋಪಿಸಿದ್ದಾರೆ.  ಶ್ರೀಕಾಂತ ಶೆಟ್ಟಿ ಸೇರಿದಂತೆ ಹಲವರ ಮೇಲೆ  ಆರೋಪ ಕೇಳಿ ಬಂದಿದೆ. 

loader