Asianet Suvarna News Asianet Suvarna News

ತೃತೀಯ ರಂಗ ನಾಯಕರು ಒಗ್ಗಟ್ಟು ಪ್ರದರ್ಶನಕ್ಕೆ ಬಂದಿದ್ದರು: ಎಚ್‌ಡಿಕೆ

‘ಒಂದೇ ವೇದಿಕೆಯಲ್ಲಿ ಅನೇಕ ರಾಷ್ಟ್ರೀಯ ನಾಯಕರ ಸಮಾಗಮ ಆಗಿರುವುದು ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರಕ್ಕೆ ಬೆಂಬಲ ನೀಡಲು ಅಲ್ಲ. ಬದಲಿಗೆ ತೃತೀಯ ರಂಗದ ನಾಯಕರೆಲ್ಲಾ ಒಂದಾಗಿದ್ದೇವೆ ಎಂಬ ಸಂದೇಶ ಸಾರಲು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಣ್ಣಿಸಿದ್ದಾರೆ.
 

At HDK's Swearing-in, Opposition's Display of Might

ಬೆಂಗಳೂರು : ‘ಒಂದೇ ವೇದಿಕೆಯಲ್ಲಿ ಅನೇಕ ರಾಷ್ಟ್ರೀಯ ನಾಯಕರ ಸಮಾಗಮ ಆಗಿರುವುದು ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರಕ್ಕೆ ಬೆಂಬಲ ನೀಡಲು ಅಲ್ಲ. ಬದಲಿಗೆ ತೃತೀಯ ರಂಗದ ನಾಯಕರೆಲ್ಲಾ ಒಂದಾಗಿದ್ದೇವೆ ಎಂಬ ಸಂದೇಶ ಸಾರಲು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಣ್ಣಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿಯೇ ರಾಷ್ಟ್ರದ ನಾಯಕರು ಪ್ರಮಾಣವಚನ ಸ್ವೀಕಾರ ಕಾರ್ಯ ಕ್ರಮವೊಂದರಲ್ಲಿ ಒಂದೆಡೆ ಸೇರಿದ್ದು ಇದೇ ಮೊದಲು. ಅವರೆಲ್ಲಾ ಆಗಮಿಸಿದ್ದು, ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರಕ್ಕೆ ಬೆಂಬಲ ನೀಡಲಿಕ್ಕಲ್ಲ. ಬದಲಿಗೆ ತೃತೀಯ ರಂಗದ ನಾಯಕರೆಲ್ಲಾ ಒಗ್ಗೂಡಿರುವ ಸಂದೇಶ ಸಾರಲು. ಮುಂದಿನ 2019ರ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಈ ಸಂದೇಶ ಸಾರುವುದು ಪ್ರಮುಖ ಉದ್ದೇಶ ಎಂದು ಹೇಳಿದರು.

ರಾಜ್ಯದಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿರುವುದು ಕಾಂಗ್ರೆಸ್‌ ಮತ್ತು ಬಿಎಸ್‌ಪಿ. ಅವರ ಬೆಂಬಲದೊಂದಿಗೆ ಸ್ಥಿರ ಸರ್ಕಾರ ನೀಡಲಾಗುವುದು. ಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಯಾವ ರೀತಿಯಾಗಿ ಕೆಲಸ ಮಾಡಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದ್ದಾರೆ ಎಂದರು.

Follow Us:
Download App:
  • android
  • ios