ಬೆಂಗಳೂರು (ಏ.24): ಕರ್ನಾಟಕದ ಚುನಾವಣೆಗೆ ಬಹುತೇಕ ದೇಶದ ಎಲ್ಲ ಖಾಸಗಿ  ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಕಾಂಗ್ರೆಸ್ ಮತ್ತು  ಬಿಜೆಪಿ ಬುಕ್ ಮಾಡಿದ್ದು, ಜೆಡಿಎಸ್ ಕೂಡ ಎರಡು ಹೆಲಿಕಾಪ್ಟರ್'ಗಳನ್ನು ಬುಕ್ ಮಾಡಿದೆಯಂತೆ. ಅಂದಹಾಗೆ ರಾಜಕೀಯ ಪಕ್ಷಗಳು ಅಡ್ವಾನ್ಸ್ ಹಣ ಕೊಟ್ಟರೆ ಮಾತ್ರ ಕಂಪನಿಗಳು ಬಾಡಿಗೆ  ಪಕ್ಕಾ ಮಾಡಿಕೊಳ್ಳುತ್ತವೆ.  ಉತ್ತರ ಪ್ರದೇಶದಲ್ಲಿ ಸೋತ ಒಂದು ಪಕ್ಷ ಇನ್ನೂ ಕಂಪನಿಗಳಿಗೆ ಹಣ ಕೊಡಲು  ಸತಾಯಿಸುತ್ತಿದೆಯಂತೆ. 

ಚುನಾವಣೆ ಖರ್ಚು ಎಷ್ಟು ಗೊತ್ತಾ?
ಕರ್ನಾಟಕದಲ್ಲಿ ಅಭ್ಯರ್ಥಿಗಳ ಖರ್ಚು ಬಿಟ್ಟು ರಾಜಕೀಯ ಪಕ್ಷಗಳು ಎಷ್ಟು ಖರ್ಚು ಮಾಡಬಹುದು ಎಂದು ಹಿರಿಯ ನಾಯಕರನ್ನು ಕೇಳಿದರೆ ಜೋರಾಗಿ ನಗುತ್ತಾರೇ ಹೊರತು ಸರಿಯಾದ ಉತ್ತರ ಹೇಳೋದಿಲ್ಲ. ಒಂದು ಅಂದಾಜಿನ ಪ್ರಕಾರ ಬಿಜೆಪಿ 2008 ರಲ್ಲಿ 250 ಕೋಟಿ ಖರ್ಚು ಮಾಡಿದ್ದರೆ, ಕಾಂಗ್ರೆಸ್  ಕೂಡ 200 ಕೋಟಿ ವೆಚ್ಚ ಮಾಡಿತ್ತು. ಆದರೆ 2013 ರಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿ 450 ಕೋಟಿ ಖರ್ಚು ಮಾಡಿದ್ದರೆ, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟೂ ಸೇರಿ 500 ರಿಂದ 600 ಕೋಟಿ ಖರ್ಚು ಮಾಡಬಹುದು ಎಂದು ಹೇಳಲಾಗುತ್ತಿದೆ.

-ರಾಜಕೀಯ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ