ಹೆಚ್ಡಿಕೆ ಸಿಎಂ: ಕೇರಳ ಸ್ವಾಮೀಜಿಯ ಭವಿಷ್ಯ ನಿಜವಾಯಿತು, ಮುಂದಿದೆಯಂತೆ ಅಚ್ಚರಿ

karnataka-assembly-election-2018 | Wednesday, May 23rd, 2018
Suvarna Web Desk
Highlights

ಎಲ್ಲರೂ ಅವರನ್ನು 'ಡೋಂಗಿ ಸ್ವಾಮಿ' ಎಂದು ಮೂದಲಿಸಿದ್ದರು.  ಆದರೆ ಬಿ.ಎಸ್‌. ಯಡಿಯೂರಪ್ಪ ಪದತ್ಯಾಗ ಮಾಡಿ, ಎಚ್‌.ಡಿ. ಕುಮಾರಸ್ವಾಮಿ ಪದಗ್ರಹಣ ಮಾಡಿದಾಗ ಎಲ್ಲವೂ ಬದಲಾಯಿತು.  ಈಗ, ಎಲ್ಲರ ಕಣ್ಣುಗಳು ಅವರನ್ನು ಹುಡುಕುತ್ತಿವೆ. 

ತಿರುವನಂತಪುರ(ಮೇ.23): ರಾಜ್ಯ ವಿಧಾನಸಭೆ ಫಲಿತಾಂಶಗಳು ಪ್ರಕಟವಾದ ಬಳಿಕ, ಕರ್ನಾಟಕ ರಾಜಕೀಯ ವೇದಿಕೆಯಲ್ಲಿ 'ನಾಟಕ'ಗಳು ಆರಂಭವಾಗಿದ್ದವು. ಕರ್ನಾಟಕವನ್ನು ಯಾರು ಆಳಲಿದ್ದಾರೆ ಎಂಬುವುದು ರಹಸ್ಯವಾಗಿತ್ತು. ಆದರೆ ಸ್ವಾಮಿ ಭದ್ರಾನಂದ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುವುದನ್ನು ಊಹಿಸಿದ್ದರು. ಈ ಬಗ್ಗೆ ಸುವರ್ಣ ನ್ಯೂಸ್ ಮೊದಲು ವರದಿಯನ್ನು ಮಾಡಿತ್ತು. 


ಬಳಿಕ ಇತರೆ ಮಾದ್ಯಮಗಳು ಕೂಡಾ ವರದಿ ಮಾಡಿದವು. ಭದ್ರಾನಂದ ಸ್ವಾಮಿ ಮೂಲತ: ಕೇರಳದವರಾಗಿದ್ದರಿಂದ ಮಳಯಾಳಂ ಮಾಧ್ಯಮಗಳು ಈ ಬೆಳವಣಿಗೆಗಳನ್ನು  ಪ್ರಸಾರ ಮಾಡಿದ್ದವು. ಆದರೆ ವಿಪರ್ಯಾಸವೇನೆಂದರೆ, ಮೊದಮೊದಲಿಗೆ ಈ ಎಲ್ಲಾ ಮಾಧ್ಯಮಗಳು, ಸ್ವಾಮೀಜಿಯ ಊಹೆಯನ್ನು ಟೀಕಿಸಿದ್ದವು. 
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ  ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾರೆ ಎಂದು  ಸ್ವಾಮಿ ಭದ್ರಾನಂದ ಊಹಿಸಿದ್ದರು. ಚುನಾವಣಾ ಫಲಿತಾಂಶಗಳು ಪ್ರಕಟವಾದ ಒಂದು ವಾರದಲ್ಲೇ ಎಲ್ಲವೂ ಬಹಿರಂಗವಾಯ್ತು. 'ಜೀವನದ ಒಡಲಿನಲ್ಲಿ ಏನೇನಿದೆ ಎಂದು ನಿಮಗೆ ಗೊತ್ತಿಲ್ಲ,' ಎಂದು ಸ್ವಾಮೀಜಿ ಪ್ರತಿಕ್ರಿಯೆ. 


ಸುಳ್ಳೆಂದವರಿಗೆ ಅಚ್ಚರಿ ಕಾದಿತ್ತು
ದೇವೇಗೌಡರ ಪಕ್ಷ ವಿಜಯ ಸಾಧಿಸುವ ಯಾವುದೇ ಲಕ್ಷಣಗಳು ಗೋಚರಿಸದಿದ್ದ ಸಂದರ್ಭದಲ್ಲಿ ಸ್ವಾಮೀಜಿ ಭವಿಷ್ಯವನ್ನು ಆಗಲೇ ಊಹಿಸಿದ್ದರು. ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಸ್ವಾಮೀಜಿಯು ತಮಾಷೆಯ ವಸ್ತುವಾಗಿದ್ದರು. ಎಲ್ಲರೂ ಅವರನ್ನು 'ಡೋಂಗಿ ಸ್ವಾಮಿ' ಎಂದು ಮೂದಲಿಸಿದ್ದರು.  ಆದರೆ ಬಿ.ಎಸ್‌. ಯಡಿಯೂರಪ್ಪ ಪದತ್ಯಾಗ ಮಾಡಿ, ಎಚ್‌.ಡಿ. ಕುಮಾರಸ್ವಾಮಿ ಪದಗ್ರಹಣ ಮಾಡಿದಾಗ ಎಲ್ಲವೂ ಬದಲಾಯಿತು.  ಈಗ, ಎಲ್ಲರ ಕಣ್ಣುಗಳು ಅವರನ್ನು ಹುಡುಕುತ್ತಿವೆ. 
ಕುಮಾರಸ್ವಾಮಿ ಅವರ ಪ್ರಭಾವಳಿ ಕೆಲವು ದುಷ್ಟ ಶಕ್ತಿಗಳ ಪ್ರಭಾವದಿಂದ ಶಕ್ತಿ ಕುಂದಿದ್ದು, ಇದನ್ನು ಅವರು ಗಂಭೀರವಾಗಿ ಪರಿಗಣಿಸಬೇಕೆಂದು ಸ್ವಾಮಿ ಭದ್ರಾನಂದ ಅವರು ಸಲಹೆ ನೀಡಿದ್ದಾರೆ. ಋಣಾತ್ಮಕ ಶಕ್ತಿಯನ್ನು ದೂರ ಮಾಡಲು ಕುಮಾರಸ್ವಾಮಿ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ, ಅವರು ಪಡೆದ ಸ್ಥಾನಮಾನ, ಅಧಿಕಾರ ಎಲ್ಲವನ್ನೂ ಕಳೆದುಕೊಳ್ಳುವ ಸಂದರ್ಭ ಬಂದೊದಗಬಹುದೆಂದು ಸ್ವಾಮೀಜಿಗಳು ಎಚ್ಚರಿಸಿದ್ದಾರೆ. 


ಸ್ವಾಮೀಜಿ ಮಾತು ನಿಜವಾಯಿತು
ಸ್ವಾಮಿ ಭದ್ರಾನಂದ  ಎಲ್ಲರನ್ನು ಸಮಾನರಾಗಿ ಕಾಣುತ್ತಾರೆ. ಸರಿಯಾದ ಮಾರ್ಗದರ್ಶನ ಮತ್ತು ಸಲಹೆಯ ಕೊರೆತೆಯ ಕಾರಣದಿಂದ ಬಿ.ಎಸ್. ಯಡಿಯೂರಪ್ಪ ಪದತ್ಯಾಗ ಮಾಡಬೇಕಾಗಿ ಬಂದುದು ಸ್ವಾಮೀಜಿಗೆ ದುಖವನ್ನುಂಟುಮಾಡಿತ್ತು. ಅವರಿಗೆ ಕಾಡುವ 'ಋಣಾತ್ಮಕ' ಶಕ್ತಿಯನ್ನು ತೆಗೆದು ಹಾಕಿದರೆ ಅವರು ಪುನಃ ಅಧಿಕಾರಕ್ಕೆ ಬರುತ್ತಾರೆ ಎಂಬುವುದು ಸ್ವಾಮಿ ಭದ್ರಾನಂದರ ಅಭಿಪ್ರಾಯ.
ಸ್ವಾಮಿಜಿ ಬಳಿ ಇರುವ 'ಅತೀಂದ್ರೀಯ ಶಕ್ತಿ'ಯಿಂದಾಗಿ ಮುಂದಿನದ್ದು ಊಹಿಸುತ್ತಾರೆ.  ತಿರುವನಂತಪುರಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿದ್ದಕ್ಕೆ  ಲ್ಲಿನ ರಾಜ ಉತ್ರಡಾಂ ತಿರುನಾಲ್ ಮಾರ್ತಾಂಡರಿಂದ 'ರಾಜ ಗುರು' ಎಂಬ ಪದವಿಯನ್ನು ಅವರು ಪಡೆದಿದ್ದಾರೆ. ತಮ್ಮ ಊಹೆಗಳಿಂದಾಗಿ ಸ್ವಾಮೀಜಿ ಯಾವಾಗಲೂ ಮಾಧ್ಯಮಗಳಲ್ಲಿ ಚರ್ಚೆಯಲ್ಲಿರುತ್ತಾರೆ.  ಸುನಾಮಿ ಎಚ್ಚರಿಕೆ,  ಅಮಿತ್ ಶಾ ಪುತ್ರನ ವಿವಾದ,  ಕೇರಳ ಮಾಜಿ ಸಿಎಂ ಊಮನ್ ಚಾಂಡಿ ಸೋಲಾರ್ ಹಗರಣ, ಜಯಲಲಿತಾ ನಿಧನ, ಮುಂಬೈ ಉಗ್ರರ ದಾಳಿ, ನಟ ದಿಲೀಪ್ ವಿಚಾರಗಳಲ್ಲಿ ಅವರು ಚರ್ಚೆಯಲ್ಲಿದ್ದರು. 
ಸನಾತನ ಧರ್ಮದ ಪ್ರಬಲ ಪ್ರಚಾರಕರಾಗಿರುವ, ಸಮಾಜ ಸುಧಾರಕರೂ ಆಗಿರುವ ಸ್ವಾಮೀಜಿ ಇತರರಿಗಾಗಿ ಬದುಕುವವರು.  ನ್ಯಾಯಕ್ಕಾಗಿ, ಅನ್ಯಾಯದ ವಿರುದ್ಧ ಹೋರಾಡುತ್ತಾರೆ. ಬಡವರಿಗೆ ಉಣಿಸುವುದು ಅವರ ಪ್ರಮುಖ ಧ್ಯೇಯ. ಈ ಶಿವಯೋಗಿ ಸ್ವಾಮಿ ಭದ್ರಾನಂದರನ್ನು ಚಾಣಾಕ್ಯನೆಂದೂ ಕರೆಯಬಹುದು.

ಫೇಸ್ಬುಕ್ ವಿಳಾಸ - https://www.facebook.com/swami.bhadraanand

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Chethan Kumar