ಸಂಜೀವ್ ಕುಮಾರ್ ಅವರು ಪಕ್ಷಪಾತಿ, ಕಾಂಗ್ರೆಸ್ ಬೆಂಬಲಿಗರಂತೆ ವರ್ತಿಸುತ್ತಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ವಿರುದ್ಧ ಅನುಪಮಾ ಶೆಣೈ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿ (ಮೇ. 08): ಸಂಜೀವ್ ಕುಮಾರ್ ಅವರು ಪಕ್ಷಪಾತಿ, ಕಾಂಗ್ರೆಸ್ ಬೆಂಬಲಿಗರಂತೆ ವರ್ತಿಸುತ್ತಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ವಿರುದ್ಧ ಅನುಪಮಾ ಶೆಣೈ ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ನಾಟಕ ಶುರುಮಾಡುತ್ತೆ. ಬೇರೆ ಪಕ್ಷದವರು ಇವಿಎಂ ಹ್ಯಾಕ್ ಮಾಡಿದ್ದಾರೆ ಅಂತ ಆರೋಪಿಸುತ್ತಾರೆ. ಆದ್ರೆ ಕರ್ನಾಟಕದಲ್ಲಂತೂ ಈ ಸಾಧ್ಯತೆ ಇಲ್ಲವೇ ಇಲ್ಲ. ಯಾಕೆಂದ್ರೆ ಮುಖ್ಯ ಚುನಾವಣಾಧಿಕಾರಿ ಅವರೇ ಕಾಂಗ್ರೆಸ್ ಬೆಂಬಲಿಗರಾಗಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ಗೆದ್ದು ಸರಕಾರ ನಡೆಸುವಂತಾಗಲು ಕೆಲಸ ಮಾಡುತ್ತಿದ್ದಾರೆ. ಕಾಂಗ್ರಸ್ ಪಕ್ಷ ನೀಡಿದ ದೂರುಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಬೇರೆ ಪಕ್ಷದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ರಾಜ್ಯದಲ್ಲಿ ನಿಷ್ಪಕ್ಷಪಾತ ಚುನಾವಣೆ ಬಗ್ಗೆ ಸಂಶಯವಿದೆ. ನಾನೇ ಖುದ್ದು ಇಬ್ಬರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದೇನೆ. ದಾಖಲೆ ಸಮೇತ ದೂರು ನೀಡಿದ್ರು ಕ್ರಮ ತೆಗೆದುಕೊಂಡಿಲ್ಲ ಎಂದು ಅನುಪಮಾ ಶೆಣೈ ಆರೋಪಿಸಿದ್ದಾರೆ.
