ಬೆಂಗಳೂರಿನಲ್ಲಿ ಮತದಾರರ ಚೀಟಿ ಹಗರಣ ಸಂಬಂಧ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸಿಗರು ಅಧಿಕಾರಕ್ಕಾಗಿ ವಾಮಮಾರ್ಗದಿಂದ ಚುನಾವಣೆ ಎದುರಿಸಲು ಸಿದ್ಧವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತದಾರರ ಚೀಟಿ ಹಗರಣ ಸಂಬಂಧ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸಿಗರು ಅಧಿಕಾರಕ್ಕಾಗಿ ವಾಮಮಾರ್ಗದಿಂದ ಚುನಾವಣೆ ಎದುರಿಸಲು ಸಿದ್ಧವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬುಧವಾರ ರೋಡ್ ಶೋ ನಡೆಸಿದ ಅವರು, ಬಳಿಕ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು.
ನನಗೆ ಬೆಳಿಗ್ಗೆ ಪೇಪರ್ ಓದಿ ಆಶ್ಚರ್ಯ ಆಯ್ತು. ಬೆಂಗಳೂರಿನ ಮನೆಯೊಂದರಲ್ಲಿ10 ಸಾವಿರ ನಕಲಿ ಮತದಾರರ ಚೀಟಿ, ಪ್ರಿಂಟಿಂಗ್ ಮೆಷಿನ್ ಸಿಕ್ತು. ಅದೂ ಕಾಂಗ್ರೆಸ್ ಮತದಾರರ ಮನೆಯಲ್ಲಿ 50 ಸಾವಿರ ನಕಲಿ ಮತದಾರರ ಪಟ್ಟಿ ಸಿಕ್ತು ಎಂದಾದಲ್ಲಿ ನಾವು ಏನನ್ನು ಯೋಚಿ ಸ್ಬೇಕು?
ಇನ್ನು ಮುಖ್ಯಮಂತ್ರಿ ಉಳಿದುಕೊಂಡಿದ್ದ ಬಾದಾಮಿ ರೆಸಾರ್ಟಿನಲ್ಲಿ ಕೋಟ್ಯಂತರ ಹಣ ಸಿಕ್ತು ಎಂಬುದು ಏನನ್ನು ತೋರಿಸುತ್ತದೆ ಯೋಚಿಸಿ ಎಂದು ಪ್ರಶ್ನಿಸಿದರು. ಇದೇವೇಳೆ ವಾಚ್ ಪ್ರಕರಣದ ಪ್ರಸ್ತಾಪ ಮಾಡಿದ ಅಮಿತ್ ಶಾ, ಸಿದ್ದರಾಮಯ್ಯನವರೇ ಚುನಾವಣಾ ಆಯೋಗಕ್ಕೆ 40 ಲಕ್ಷದ ವಾಚಿನ ವಿವರ ಸಲ್ಲಿಸಿದ್ದೀರಾ? ಡಾ.ವರ್ಮಾ ನಿಮಗೆ ಈ ವಾಚ್ ಯಾವ ಕೆಲಸಕ್ಕೆ ಕೊಟ್ಟರು ಎಂಬು ದನ್ನು ಹೇಳಿ ಎಂದು ಪ್ರಶ್ನಿಸಿದರು.

Last Updated 10, May 2018, 7:37 AM IST