ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ: ಅಂಬರೀಶ್

First Published 21, Apr 2018, 2:17 PM IST
Ambarish Not Contest to Election
Highlights

ಯಾವುದೇ ಕಾರಣಕ್ಕೂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಅಂಬರೀಶ್ ಖಡಾಖಂಡಿತವಾಗಿ ಹೇಳಿದ್ದಾರೆ. 
ನಾನು ಶಾಸಕನಾಗಿದ್ದಾಗ ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೂ ಏಕಾಏಕಿ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿದೆ. ಈಗ ನನಗೆ ಟಿಕೆಟ್ ನೀಡಿ ಸ್ಪರ್ಧಿಸುವಂತೆ ಹೇಳಲಾಗುತ್ತಿದೆ,. ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ ಎಂದು ಅಂಬರೀಶ್ ಹೇಳಿದ್ದಾರೆ. 

ಬೆಂಗಳೂರು (ಏ. 21):  ಯಾವುದೇ ಕಾರಣಕ್ಕೂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಅಂಬರೀಶ್ ಖಡಾಖಂಡಿತವಾಗಿ ಹೇಳಿದ್ದಾರೆ. 

ನಾನು ಶಾಸಕನಾಗಿದ್ದಾಗ ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೂ ಏಕಾಏಕಿ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿದೆ. ಈಗ ನನಗೆ ಟಿಕೆಟ್ ನೀಡಿ ಸ್ಪರ್ಧಿಸುವಂತೆ ಹೇಳಲಾಗುತ್ತಿದೆ,. ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ ಎಂದು ಅಂಬರೀಶ್ ಹೇಳಿದ್ದಾರೆ. 

ರೆಬೆಲ್ ಸ್ಟಾರ್ ಶಾಸಕ ಅಂಬರೀಶ್ ಮನವೊಲಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.  ಮತ್ತೊಮ್ಮೆ ಸಂಧಾನಕ್ಕೆ ಸಿಎಂ ಸಿದ್ದರಾಮಯ್ಯ ಕೆ.ಜೆ.ಜಾರ್ಜ್’ರನ್ನು ಕಳುಹಿಸಿದ್ದಾರೆ. ಆದರೆ ಮನೆ ಬಳಿ ಜಾರ್ಜ್ ಬರುತ್ತಿದ್ದಂತೆ ಮನೆಯಿಂದ ಅಂಬಿ ನಿರ್ಗಮಿಸಿದ್ದಾರೆ.  ಅಂಬರೀಶ್ ಮನವೊಲಿಸಲು ಸಿಎಂ ಸೂಚನೆ ಮೇರೆಗೆ  ಜಾರ್ಜ್ ಬಂದಿದ್ದರು. ಜಾರ್ಜ್ ಬರುವ 10 ನಿಮಿಷಗಳ ಹಿಂದೆ ಮನೆಯಿಂದ ಅಂಬಿ ನಿರ್ಗಮಿಸಿದ್ದಾರೆ.  ಅಂಬರೀಶ್ ಸಿಗದೇ ಜಾರ್ಜ್  ವಾಪಸ್ಸಾಗಿದ್ದಾರೆ. 

loader