ಕಾಂಗ್ರೆಸ್ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

Actor yogi Campaign for Congress
Highlights

ಕಾಂಗ್ರೆಸ್ ಪರವಾಗಿ ಲೂಸ್ ಮಾದ ಅಲಿಯಾಸ್ ಯೋಗಿ ಪ್ರಚಾರಕ್ಕಿಳಿದಿದ್ದಾರೆ. 
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಆರ್.ಕೆ.ರಮೇಶ್ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದರು. ಸಂಸದ ಡಿ.ಕೆ‌.ಸುರೇಶ್ ಹಾಗೂ ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು.

ಬೆಂಗಳೂರು (ಏ. 29): ಕಾಂಗ್ರೆಸ್  ಪರವಾಗಿ  ಲೂಸ್  ಮಾದ ಅಲಿಯಾಸ್ ಯೋಗಿ ಪ್ರಚಾರಕ್ಕಿಳಿದಿದ್ದಾರೆ. 

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಆರ್.ಕೆ.ರಮೇಶ್ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದರು. ಸಂಸದ ಡಿ.ಕೆ‌.ಸುರೇಶ್ ಹಾಗೂ ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು. ಜೈಲಿಗೆ ಹೋಗಿ ಬಂದವರಿಗೆ ಮತ ಹಾಕಬೇಡಿ. ಇನ್ನೂ ಬಿಜೆಪಿ ಮುಖ್ಯಮಂತ್ರಿಗಳು ಜೈಲಿಗೆ ಹೋಗಿದವರೆಂದು ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದಾರೆ.  

ಮಾಧ್ಯಮದವರೊಂದಿಗೆ ಮಾತಾನಾಡಿದ ಸಂಸದ ಡಿ.ಕೆ.ಸುರೇಶ್ ಪ್ರಧಾನಿ ನರೇಂದ್ರ ಮೋದಿಯವರ ಮನ್ ಬಾತ್ ಈ ಬಾರಿ ವಾಂಗಿ ಬಾತ್ ಆಗಲಿದೆಯೆಂದು ಮೋದಿಯನ್ನು  ವ್ಯಂಗ್ಯ ಮಾಡಿದರು.   ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್’ಗೆ ಮತ ನೀಡುವಂತೆ ತಿಳಿಸುತ್ತಾ,  ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್’ಗೆ ಸ್ಪಷ್ಟ ಬಹುಮತ ಸಿಗಲಿದೆಯೆಂದು ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು

loader