ಬೆಂಗಳೂರು (ಮೇ. 02): ಮೋದಿ ಬಂದ ಮೇಲೆ ಕಾವು ಏರುತ್ತೆ ಅಂದ್ರು ಆದರೆ ಏನೂ ಆಗಿಯೇ ಇಲ್ಲ.  ನಾನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಪ್ರಧಾನಿ ಮೋದಿ ಹಾಗೇ ಭಾಷಣ ಮಾಡಲ್ಲ. ಉತ್ತರ ಕೊಡುತ್ತೇನೆ ಎಂದು ಬಳ್ಳಾರಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. 

ಪ್ರಶ್ನೆ ಮಾಡಿದ್ರೆ  ನಾಲಿಗೆ ಕತ್ತರಿಸ್ತೀನಿ. ಬೆರಳು ಕತ್ತರಿಸುತ್ತೇನೆ ಅಂತಾರೆ.  ಸಮಾಜ ಚೆನ್ನಾಗಿ ಇರಬೇಕು ಎನ್ನುವುದಕ್ಕೆ ನನ್ನ ಹೋರಾಟ ಎಂದಿದ್ದಾರೆ. 

ರಾಹುಲ್ ಗಾಂಧಿ ಬಗ್ಗೆ ಎಷ್ಡು ಬಾರಿ ಮಾತನಾಡುತ್ತೀರಿ. ಸವಕಲು ನಾಣ್ಯದ ಭಾಷಣ, ಎಷ್ಡು ಬಾರಿ ಸುಳ್ಳು ಹೇಳ್ತಿರಿ?  ನೀವು ಎರಡು ಕಡೆ ಸ್ಪರ್ಧೆ ಮಾಡಲಿಲ್ಲವೇ?  ಮೂಗಿಗೆ ತುಪ್ಪ ಸವರುವ ಕೆಲಸ‌ ಮಾಡುತ್ತಿದ್ದೀರಿ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಈಗ ಗೌರವ ಬಂದಿದೆ. ಕಾವೇರಿ ಬಗ್ಗೆ ಗೌಡರ ಪ್ರಶ್ನೆಗೆ ಉತ್ತರವಿಲ್ಲ. ಒಬ್ಬ ಪ್ರಧಾನಿಯಾದವರು ಸೋನಿಯಾರನ್ನು ಇಟಲಿ ಎಂದು ವ್ಯಂಗ್ಯವಾಡಬಹುದೇ ಎಂದು ಪ್ರಕಾಶ್ ರೈ ಹೇಳಿದ್ದಾರೆ.