ಬೆಂಗಳೂರಿನಲ್ಲಿ 28 ಕ್ಷೇತ್ರ, 91 ಲಕ್ಷ ಮತದಾರರು

91 Lakh voters at Bengaluru City
Highlights

ಡಿಸೆಂಬರ್‌ನಲ್ಲಿ ಪ್ರಕಟಿಸಲಾಗಿದ್ದ ಅಂತಿಮ ಮತದಾರರ ಪಟ್ಟಿ ವೇಳೆ 46,04,190 ಪುರುಷರು,41,92,706 ಮಹಿಳೆಯರು, 1,439 ಇತರರು ಸೇರಿ ಒಟ್ಟು 87,98,335 ಮತದಾರರಿದ್ದರು. ಜನವರಿ 23ರಿಂದ ಏಪ್ರಿಲ್ 14 ರವರೆಗೆ ನಡೆದ ನಿರಂತರ ಪರಿಷ್ಕರಣೆ ವೇಳೆ ಒಟ್ಟು 4,39,226 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. 85,248 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. 

ಬೆಂಗಳೂರು(ಮೇ.01): 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಮತದಾರರನ್ನೂ ಒಳಗೊಂಡು ಒಟ್ಟಾರೆ 91,13,095 ಮತದಾರರಿದ್ದಾರೆ ಎಂದು
ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಬಾರಿ 4,39,226 ಲಕ್ಷ ಹೊಸ ಮತ ದಾರರು ಮತದಾರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ನಿಧನ, ಕ್ಷೇತ್ರ ಬದಲಾವಣೆ ಸೇರಿದಂತೆ ಮತ್ತಿತರ ಕಾರಣಗಳಿಂದ 85,248 ಮತದಾರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅಂತಿಮವಾಗಿ 91,13,095 ಮತದಾರರು ಪಟ್ಟಿಯಲ್ಲಿ ಉಳಿದಿದ್ದಾರೆ ಎಂದು ತಿಳಿಸಿದರು.
ಡಿಸೆಂಬರ್‌ನಲ್ಲಿ ಪ್ರಕಟಿಸಲಾಗಿದ್ದ ಅಂತಿಮ ಮತದಾರರ ಪಟ್ಟಿ ವೇಳೆ 46,04,190 ಪುರುಷರು,41,92,706 ಮಹಿಳೆಯರು, 1,439 ಇತರರು ಸೇರಿ ಒಟ್ಟು 87,98,335 ಮತದಾರರಿದ್ದರು. ಜನವರಿ 23ರಿಂದ ಏಪ್ರಿಲ್ 14 ರವರೆಗೆ ನಡೆದ ನಿರಂತರ ಪರಿಷ್ಕರಣೆ ವೇಳೆ ಒಟ್ಟು 4,39,226 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. 85,248 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಪಟ್ಟಿಯಲ್ಲಿ ತಿದ್ದುಪಡಿಯಾದ ಮತದಾರರ ಸಂಖ್ಯೆ 39,126 ಹಾಗೂ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಗೊಂಡವರು 11,878 ಮಂದಿ ಇದ್ದಾರೆ ಎಂದು ವಿವರಿಸಿದರು.
ಮತದಾರರ ಹೆಸರು, ಕ್ರಮಸಂಖ್ಯೆ, ಮತಗಟ್ಟೆ ವಿಳಾಸವನ್ನು ಒಳಗೊಂಡ ಮತದಾರರ ಚೀಟಿ, ಮತದಾರರ ಮಾರ್ಗದರ್ಶಿ ಪುಸ್ತಕ ಹಾಗೂ ಗುರುತಿನ ಚೀಟಿಗಳ ವಿತರಣಾ ಕಾರ್ಯ ಮೇ 3ರಿಂದ 5ರವರೆಗೆ ನಡೆಯಲಿದೆ. ನಗರದಲ್ಲಿ ಒಟ್ಟು 8,278 ಮತಗಟ್ಟೆ ಅಧಿಕಾರಿಗಳಿದ್ದು, ಅವರು ಮನೆಮನೆಗೂ ಹೋಗಿ ವಿತರಿಸುತ್ತಾರೆ ಎಂದರು. 

loader