ಮೈಸೂರು (ಮೇ. ೦4): ಸಿಎಂ ಸಿದ್ದರಾಮಯ್ಯ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡಿದೆ. 

ಚುನಾವಣೆ ಅಧಿಕಾರಿಗಳು ಚಾಪೆ ಕೆಳಗೆ ತೂರಿದರೆ ಅಭ್ಯರ್ಥಿಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಕಾರು, ಬಸ್ಸಿನಲ್ಲಿ ಹಣ ಸಾಗಿಸಿದರೆ ಸಿಕ್ಕಿ ಹಾಕಿಕೊಂಡು ಬೀಳುತ್ತೇವೆಂದು ಬೈಕ್’ನಲ್ಲಿ ಹಣ ಸಾಗಿಸಲು ಹೋಗಿ ಸಿಕ್ಕಿ ಹಾಕಿಕೊಂಡು ಬಿದ್ದಿದ್ದಾರೆ. 

ಬೈಕ್ ಮೂಲಕ ಹಣ ಸಾಗಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು 5,42,220 ರೂ ಹಣ ಜಪ್ತಿಯಾಗಿದೆ.  ಶ್ರೀನಿವಾಸ್ ಮತ್ತು ಅಭಿಷೇಕ್ ಎನ್ನುವವರು ದಾಖಲೆಯಿಲ್ಲದ ಹಣ ಸಾಗಿಸುತ್ತಿದ್ದರು.  ದಾಖಲೆ ಇಲ್ಲದ 5 ಲಕ್ಷ ಹಣ ಮೈಸೂರಿನ ಮೈದನಹಳ್ಳಿ ತಪಾಸಣಾ ಕೇಂದ್ರದಲ್ಲಿ  ಜಪ್ತಿಯಾಗಿದೆ.  ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.