ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ 104, ಕಾಂಗ್ರೆಸ್'ಗೆ 78 ಹಾಗೂ ಜೆಡಿಎಸ್'ಗೆ 38 ಸ್ಥಾನ ಲಭಿಸಿದ್ದವು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಅವಕಾಶ ಕೇಳಿದರೆ, ತಾನು ಅತಿ ದೊಡ್ಡ ಪಕ್ಷ ಬಿಜೆಪಿಗೂ ಹಕ್ಕು ಮಂಡಿಸಲು ಅವಕಾಶ ನೀಡುವಂತೆ ಬಿಎಸ್'ವೈ ನೇತೃತ್ವದ ಮುಖಂಡರು ಮನವಿ ಮಾಡಿದ್ದರು.
ಬೆಂಗಳೂರು(ಮೇ.16): ನಾಳೆ ಬಿಎಸ್'ವೈ ಜೊತೆ ಆರ್.ಅಶೋಕ್, ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ ಹಾಗೂ ಗೋವಿಂದ ಕಾರಜೋಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು ಹೈಕಮಾಂಡ್ ಸೂಚನೆ ಮೇರೆಗೆ ಈ ನಾಲ್ವರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಲ್ಕು ಮುಖಂಡರು ಒಕ್ಕಲಿಗ, ವಾಲ್ಮೀಕಿ, ಕುರುಬ ಹಾಗೂ ಮಾದಿಗ ಸಮುದಾಯದವರಾಗಿದ್ದಾರೆ. ಸಂಖ್ಯಾ ಬಲದ ಆಧಾರದಲ್ಲಿ ಬಿಎಸ್'ವೈ ಅವರಿಗೆ ಅವಕಾಶ ನೀಡಲಾಗಿದೆ.
ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ 104, ಕಾಂಗ್ರೆಸ್'ಗೆ 78 ಹಾಗೂ ಜೆಡಿಎಸ್'ಗೆ 38 ಸ್ಥಾನ ಲಭಿಸಿದ್ದವು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಅವಕಾಶ ಕೇಳಿದರೆ, ತಾನು ಅತಿ ದೊಡ್ಡ ಪಕ್ಷ ಬಿಜೆಪಿಗೂ ಹಕ್ಕು ಮಂಡಿಸಲು ಅವಕಾಶ ನೀಡುವಂತೆ ಬಿಎಸ್'ವೈ ನೇತೃತ್ವದ ಮುಖಂಡರು ಮನವಿ ಮಾಡಿದ್ದರು.
Scroll to load tweet…