391 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ

First Published 7, May 2018, 8:47 AM IST
391 candidates facing criminal cases
Highlights

ಕರ್ನಾಟಕ ಚುನಾವಣೆಗೆ ಸ್ಪರ್ಧಿಸಿರುವ 2560  ಅಭ್ಯರ್ಥಿಗಳ ಪೈಕಿ 391  ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಅವರಲ್ಲಿ 254 ಮಂದಿ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ (ಎಡಿಆರ್) ವರದಿ ತಿಳಿಸಿದೆ. 

ನವದೆಹಲಿ: ಕರ್ನಾಟಕ ಚುನಾವಣೆಗೆ ಸ್ಪರ್ಧಿಸಿರುವ 2560  ಅಭ್ಯರ್ಥಿಗಳ ಪೈಕಿ 391  ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಅವರಲ್ಲಿ 254 ಮಂದಿ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ (ಎಡಿಆರ್) ವರದಿ ತಿಳಿಸಿದೆ. 

ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು 2,655 ಮಂದಿಯಲ್ಲಿ 2,560 ಮಂದಿ ಸಲ್ಲಿಸಿರುವ ಅಫಿಡವಿಟ್ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ. 25 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಮಂದಿ ವಿರುದ್ಧ ಕೊಲೆ ಪ್ರಕರಣವೂ ಇದೆ.
 
23 ಅಭ್ಯರ್ಥಿಗಳ ವಿರುದ್ಧ ಮಹಿಳೆಯರಿಗೆ ಸಂಬಂಧಿಸಿದ  ಅಪರಾಧ ಪ್ರಕರಣಗಳಿವೆ. ಕನಿಷ್ಠ ಮೂರು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯಿರುವ ಕ್ಷೇತ್ರಗಳನ್ನು ‘ರೆಡ್ ಅಲರ್ಟ್’ ಕ್ಷೇತ್ರಗಳೆಂದು ಪರಿಗಣಿಸಲಾಗುತ್ತದೆ. ಇಂತಹ 56 ಕ್ಷೇತ್ರಗಳನ್ನು ‘ರೆಡ್ ಅಲರ್ಟ್’ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. 2,560 ಅಭ್ಯರ್ಥಿಗಳ ಪೈಕಿ 883 ಮಂದಿ ಕೋಟ್ಯಧಿಪತಿಗಳು.

loader