277 ನಾಮಪತ್ರ ತಿರಸ್ಕೃತ : 3226 ಮಂದಿ ಕಣದಲ್ಲಿ

First Published 27, Apr 2018, 10:51 AM IST
277 Nominations Rejected
Highlights

ರಾಜ್ಯ ವಿಧಾನಸಭಾ ಚುನಾವಣೆಗೆ ಸಲ್ಲಿಕೆಯಾಗಿರುವ 3374  ನಾಮ ಪತ್ರಗಳ ಪೈಕಿ 277 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, 3226 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಸಲ್ಲಿಕೆಯಾಗಿರುವ 3374  ನಾಮ ಪತ್ರಗಳ ಪೈಕಿ 277 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, 3226 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬೆಳಗಾವಿ ಕ್ಷೇತ್ರದಲ್ಲಿ ಅಧಿಕ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, 26 ನಾಮಪತ್ರಗಳು ತಿರಸ್ಕೃತವಾಗಿವೆ. ಬೀದರ್‌ನಲ್ಲಿ ಎರಡು ನಾಮಪತ್ರಗಳು ತಿರಸ್ಕಾರ ಗೊಂಡಿವೆ. 
ಅಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಮುಳ ಬಾಗಲಿನಲ್ಲಿ 60 ನಾಮಪತ್ರಗಳ ಪೈಕಿ 4 ತಿರಸ್ಕೃತಗೊಂಡಿದ್ದು, ಅಂತಿಮವಾಗಿ 56 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿದಿರುವ ವರುಣಾದಲ್ಲಿ 35 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ ಎಂದು ಹೇಳಿದೆ.
ತುಮಕೂರಿನಲ್ಲಿ 17, ಚಿತ್ರದುರ್ಗದಲ್ಲಿ 11, ರಾಯಚೂರು, ದಕ್ಷಿಣ ಕನ್ನಡ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 10 ನಾಮಪತ್ರಗಳು ತಿರಸ್ಕೃತಗೊಂಡಿವೆ. ಹಾವೇರಿ ಕ್ಷೇತ್ರದಲ್ಲಿ 9, ಕೊಪ್ಪಳ ಕ್ಷೇತ್ರದಲ್ಲಿ 8, ವಿಜಯಪುರ, ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಕ್ಷೇತ್ರದಲ್ಲಿ ತಲಾ 5 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಮಾಹಿತಿ ನೀಡಿದೆ.

loader