ಇಬ್ಬರು ಮುಖಂಡರು ಕಾಂಗ್ರೆಸ್ ನಿಂದ ವಜಾ

First Published 20, May 2018, 11:18 AM IST
2 Leaders Expelled From Congress Party
Highlights

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ.  ಇದೇ ಸಂದರ್ಭದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ

ಬೆಂಗಳೂರು (ಮೇ 20)  : ಕರ್ನಾಟಕ ಚುನಾವಣೆಯ ಹೈಡ್ರಾಮ ಒಂದು ಹಂತದಲ್ಲಿ ಕೊನೆಗೊಂಡಂತಾಗಿದೆ. ಬಿಎಸ್ 55 ಗಂಟೆಯ ಸಿಎಂ ಆಗಿ ಕೆಳಕ್ಕಿಳಿದಿದ್ದಾರೆ. 

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ.  ಇದೇ ಸಂದರ್ಭದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. 

ಸದ್ಯ  ಕಾಂಗ್ರೆಸ್‌ನಿಂದ ಕೆಲ ಕಾಲ ತಪ್ಪಿಸಿಕೊಂಡಿದ್ದ ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಜತೆ ಖಾಸಗಿ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಮಸ್ಕಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಸ್ವಾಮಿ ಹಾಗೂ ಮಸ್ಕಿ ನಗರ ಬ್ಲಾಕ್ ಸಮಿತಿ ಅಧ್ಯಕ್ಷ ಬಸವಂತರಾಯ ಕುರಿ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಕಾಂಗ್ರೆಸ್ ಆದೇಶಿಸಿದೆ.

loader