15 ಬಿಜೆಪಿ ಬಂಡಾಯ ಸ್ಪರ್ಧಿಗಳ ಉಚ್ಛಾಟನೆ

15 BJP Leader Expelled From Party
Highlights

ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಮುಖಂಡರಾಗಿ ಹೊರಹೊಮ್ಮಿದ್ದವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಒಟ್ಟು 15 ಮುಖಂಡರಿಗೆ ಬಂಡಾಯದ ಬಿಸಿ ತಟ್ಟಿದೆ. 

ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಮುಖಂಡರಾಗಿ ಹೊರಹೊಮ್ಮಿದ್ದವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಒಟ್ಟು 15 ಮುಖಂಡರಿಗೆ ಬಂಡಾಯದ ಬಿಸಿ ತಟ್ಟಿದೆ. 

ಮೊಳಕಾಲ್ಮುರು ಕ್ಷೇತ್ರದ ತಿಪ್ಪೇಸ್ವಾಮಿ ಸೇರಿದಂತೆ ರಾಜ್ಯದ 15 ಬಂಡಾಯ ಮುಖಂಡರನ್ನು ಆರು ವರ್ಷ ಪಕ್ಷದಿಂದ ಉಚ್ಚಾಟಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.

 ತಿಪ್ಪೇಸ್ವಾಮಿ ಅವರಲ್ಲದೆ, ಖಾನಾಪುರ ಕ್ಷೇತ್ರದ ಗಜಾನನ ರೆಹಮಾನಿ, ಬೈಲಹೊಂಗಲ ಕ್ಷೇತ್ರದ ಜಗದೀಶ್ ಮೆಟಗುಡ್ಡ, ಕುಮಟಾ ಕ್ಷೇತ್ರದ ಸೂರಜ್ ನಾಯ್ಕ, ರಾಮದುರ್ಗ ಕ್ಷೇತ್ರದ ರಮೇಶ್ ಪಂಚಗಟ್ಟಿ, ಮಳವಳ್ಳಿ ಕ್ಷೇತ್ರದ ಮಹದೇವ, ರಾಣೆಬೆನ್ನೂರು ಕ್ಷೇತ್ರದ ವಿ.ಸಿ. ಪಾಟೀಲ್, ಹೂವಿನ ಹಡಗಲಿ ಕ್ಷೇತ್ರದ ಓದೊಗಂಗಪ್ಪ, ಸಂಡೂರು ಕ್ಷೇತ್ರದ ಬಂಗಾರಿ ಹನುಮಂತ, ಗುಬ್ಬಿ ಕ್ಷೇತ್ರದ ದಿಲೀಪ್ ಕುಮಾರ್, ಜಮಖಂಡಿ ಕ್ಷೇತ್ರದ ಸಂಗಮೇಶ ನಿರಾಣಿ, ಶಿಗ್ಗಾಂವ್ ಕ್ಷೇತ್ರದ ಸೋಮಣ್ಣ ಬೇವಿನಮರದ, ತರೀಕೆರೆ ಕ್ಷೇತ್ರದ ಗೋಪಿಕೃಷ್ಣ, ಹೊಳಲ್ಕೆರೆಯ ಹನುಮಕ್ಕ, ಹುನಗುಂದದ ನವಲಗಿ ಹಿರೇಮಠ.

loader