ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ 12 ವಿವಿಧ ಬಗೆಯ ದಾಖಲಾತಿಗಳ ಪೈಕಿ ಯಾವುದಾದರೂ ಒಂದು ದಾಖಲಾತಿಯನ್ನು ಹಾಜರು ಪಡಿಸಿ ಮತ ಚಲಾಯಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು : ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ 12 ವಿವಿಧ ಬಗೆಯ ದಾಖಲಾತಿಗಳ ಪೈಕಿ ಯಾವುದಾದರೂ ಒಂದು ದಾಖಲಾತಿಯನ್ನು ಹಾಜರು ಪಡಿಸಿ ಮತ ಚಲಾಯಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 12ರಂದು ನಡೆಯುವ ಮತದಾನ ದಿನದಂದು ಮತಚಲಾಯಿಸಲು ಮತಗಟ್ಟೆಪ್ರವೇಶಿಸುವ ಮತದಾರರು ಮತಗಟ್ಟೆಅಧಿಕಾರಿಗೆ ತಮ್ಮ ಗುರುತನ್ನು ಖಾತ್ರಿ ಪಡಿಸಲು ಮತದಾರರ ಗುರುತಿನ ಚೀಟಿಯನ್ನು ತೋರಿಸಬೇಕು. ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿಯಲ್ಲಿ ದೋಷಗಳಿದ್ದರೆ ಅಥವಾ ತರಲು ಸಾಧ್ಯವಾಗದಿದ್ದರೆ ಕೇಂದ್ರ ಚುನಾವಣಾ ಆಯೋಗ ಪರಿಗಣಿಸಿರುವ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಯು ಬೇರೆ ವಿಧಾನಸಭಾ ಕ್ಷೇತ್ರದ ಗುರುತಿನ ಚೀಟಿ ತೋರಿಸಿದರೂ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಸಾಗರೋತ್ತರ ಮತದಾರರು ತಮ್ಮ ಗುರುತಿಗೆ ಮತಗಟ್ಟೆಯಲ್ಲಿ ಪಾಸ್‌ಪೋರ್ಟ್‌ ಮೂಲ ಪ್ರತಿಯನ್ನು ಮಾತ್ರ ಹಾಜರುಪಡಿಸಬೇಕು. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ಗುರುತಿನ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.

ಪರ್ಯಾಯ ಗುರುತು ಚೀಟಿಗಳು

ಪಾಸ್‌ಪೋರ್ಟ್‌

ಚಾಲನಾ ಪರವಾನಗಿ

ಬ್ಯಾಂಕ್‌/ಪೋಸ್ಟ್‌ ಆಫೀಸ್‌ ಫೋಟೋವುಳ್ಳ ಪಾಸ್‌ ಬುಕ್‌

ನರೇಗಾ ಜಾಬ್‌ ಕಾರ್ಡ್‌

ಆರೋಗ್ಯ ವಿಮಾ ಸ್ಮಾರ್ಟ್‌

ಪೋಟೋವುಳ್ಳ ಪಿಂಚಣಿ ದಾಖಲೆ

ಆಧಾರ್‌ ಕಾರ್ಡ್‌

ಪಾನ್‌ ಕಾರ್ಡ್‌

ಕೇಂದ್ರ/ರಾಜ್ಯ/ಪಿಎಸ್‌ಯು ನೌಕರರಾಗಿದ್ದರೆ ಸರ್ಕಾರ ಕೊಟ್ಟರುವ ಫೋಟೋ ಸಹಿತ ಗುರುತು ಚೀಟಿ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನೀಡಿರುವ ಸ್ಮಾರ್ಟ್‌ ಕಾರ್ಡ್‌

ಅಧಿಕೃತ ಫೋಟೋ ವೋಟರ್‌ ಸ್ಲಿಪ್‌

ಸಂಸದರು, ಶಾಸಕರು, ಎಮ್ಮೆಲ್ಸಿಗಳಿಗೆ ನೀಡಿದ ಅಧಿಕೃತ ಗುರುತು ಚೀಟಿ.