ಬೆಂಗಳೂರು (ಮೇ.02): ಮೋದಿ ದೇವೇಗೌಡರ ಹೊಗಳಿಕೆಗೆ ಸಿಎಂ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.  

ಮೋದಿ ಅವರೇ ಶಿಷ್ಡಾಚಾರದ ಬಗ್ಗೆ ನಿಮ್ಮ ಫ್ರೀ ಅಡ್ವೈಸ್ ಬೇಕಾಗಿಲ್ಲ. ಹಿರಿಯ ನಾಯಕರಿಗೆ ಗೌರವ ಕೊಡುವುದನ್ನು ನಿಮ್ಮಿಂದ ಕಲಿಯಬೇಕಿಲ್ಲ. 2014 ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಬಗ್ಗೆ ನೀವು ಕೊಟ್ಟ ಶಿಷ್ಟಾಚಾರ ನೋಡಿದ್ದೇವೆ ಎಂದು ಸಿಎಂ ಮೋದಿಗೆ ತಿರುಗೇಟು ನೀಡಿದ್ದಾರೆ. 

ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ವಿಚಾರದಲ್ಲಿ ನೀವು ತೋರಿಸಿರುವ ಶಿಷ್ಟಾಚಾರ ಏನೆಂಬುದು ಗೊತ್ತಿದೆ. 75 ವರ್ಷದ ಓಲ್ಡ್  ಮ್ಯಾನ್ ಬಿಎಸ್ ವೈ ನಿಮಗೆ ಇಷ್ಟೊಂದು ತಲೆಬಾಗುವ  ಅಗತ್ಯತೆ ಇತ್ತೇ? ಎಂದು ಪ್ರಶ್ನಿಸಿದ್ದಾರೆ.