ಕಲಬುರಗಿ(ನ.9): ಸುಪ್ರೀಂಕೋರ್ಟ್ ನೀಡಿದ ಅಯೋಧ್ಯೆ ತೀರ್ಪು ಸ್ವಾಗತಾರ್ಹವಾಗಿದೆ. ಸುಪ್ರೀಂ ನೀಡುವ ತೀರ್ಪು ಏನೇ ಬಂದ್ರೂ ಸ್ವಾಗತಿಸಬೇಕು ಎಂದು ಹೇಳಿದ್ದೆವು, ಈಗಲೂ ಇದೆ ಮಾತು ಹೇಳುತ್ತಿದ್ದೇನೆ. ನಮ್ಮ ಜನರಿಗೆ ಕೈ ಮುಗಿದು ಕೇಳಿಕೊಳ್ಳುತ್ತೆನೆ. ದಯವಿಟ್ಟು ಶಾಂತಿ ಸಂಯಮದಿಂದ ವರ್ತಿಸಿ ಎಂದು ಸಂಸದ ಉಮೇಶ ಜಾಧವ್ ಅವರು ಹೇಳಿದ್ದಾರೆ. 

ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐವರು ನ್ಯಾಯಾಧೀಶರಿವರು

ಶನಿವಾರ ನಗರದಲ್ಲಿ ಮಾತನಾಡಿದ ಅವರು, ಈ ತೀರ್ಪನ್ನು ಸ್ವೀಕರಿಸುವ ಮೂಲಕ ಕಲಬುರಗಿ ಜಿಲ್ಲೆ ಭಾವೈಕ್ಯತೆಯ ನೆಲ ಎಂಬುದನ್ನು ಸಾಬಿತು ಪಡಿಸಿ ಎಂದು ಹೇಳಿದ್ದಾರೆ. 

Fact Check: ಅಯೋಧ್ಯೆ ಪೊಲೀಸರಿಂದ ಫೇಸ್ಬುಕ್ ಮೇಲೆ ಕಣ್ಣು!

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ, ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿದೆ.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!